ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೆ 4 ದಿನ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

0
Spread the love

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್‌ ಮತ್ತು ಗ್ಯಾಂಗ್‌ ಸದಸ್ಯರ ನ್ಯಾಯಾಂಗ ಬಂಧನ ಅವಧಿ ಸೆ.17ವರೆಗೆ ವಿಸ್ತರಣೆ ಮಾಡಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಆದೇಶ ಹೊರಡಿಸಿದ್ದಾರೆ. ಇಂದು ನ್ಯಾಯಾಂಗ ಬಂಧನದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 24ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.

Advertisement

ಪವಿತ್ರಾ ಗೌಡ, ದರ್ಶರ್ನ್‌ ಸೇರಿದಂತೆ ಎಲ್ಲಾ ಆರೋಪಿಗಳ ಹೆಸರನ್ನು ನ್ಯಾಯಾಧೀಶರು ಕರೆದಾಗ ಆರೋಪಿಗಳು ಎಸ್‌ ಸರ್‌ ಎಂದು ಹೇಳಿ ವಿಚಾರಣೆಗೆ ಹಾಜರಾಗಿರುವುದನ್ನು ದೃಢೀಕರಿಸಿದರು. ಈ ವೇಳೆ ಸಂಪೂರ್ಣ ಚಾರ್ಜ್‌ಶೀಟ್‌ ನೀಡಬೇಕು. ಎಲೆಕ್ಟ್ರಾನಿಕ್ಸ್‌ ಸಾಕ್ಷ್ಯಗಳನ್ನು ಒಂದು ವಾರದಲ್ಲಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದರು. ಆದರೆ ಇನ್ನೂ ನೀಡಿಲ್ಲ ಎಂದು ಆರೋಪಿಗಳ ಪರ ವಕೀಲರು ಕೋರ್ಟ್‌ ಗಮನಕ್ಕೆ ತಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ CrPC ಸೆಕ್ಷನ್ 164 ಹೇಳಿಕೆಯನ್ನು ಸರ್ಟಿಫೈ ಕಾಪಿ ಕೊಡುವಂತೆ  ದರ್ಶನ್‌, ಪವಿತ್ರಾ ಗೌಡ ಸಹಾಯಕ ಈ ಪ್ರಕರಣದಲ್ಲಿ ಎ9 ಆರೋಪಿಯಾಗಿರುವ ರಾಜನ ಪರ ವಕೀಲರು ಕೋರ್ಟ್‌ನಲ್ಲಿ ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು ಸೆಷನ್ಸ್‌ ಕೋರ್ಟ್‌ನಲ್ಲಿ ಪಡೆದುಕೊಳ್ಳಿ ಎಂದು ಸೂಚಿಸಿದರು.


Spread the love

LEAVE A REPLY

Please enter your comment!
Please enter your name here