ಜನ ಮರಳೋ, ಜಾತ್ರೆ ಮರಳೋ: ವಿಜಯನಗರದಲ್ಲಿ ಲಕ್ಷ, ಲಕ್ಷ ಕೊಟ್ಟು ಕತ್ತೆ ಖರೀದಿಗೆ ಮುಂದಾದ ರೈತರು!

0
Spread the love

ವಿಜಯನಗರ:- ವಿಜಯನಗರದಲ್ಲಿ ಜನ ಮರಳೋ, ಜಾತ್ರೆ ಮರಳೋ ಎಂಬ ಪ್ರಶ್ನೆ ಎದ್ದಿದ್ದು, ಲಕ್ಷ, ಲಕ್ಷ ಕೊಟ್ಟು ಕತ್ತೆ ಖರೀದಿಯಲ್ಲಿ ರೈತರು ನಿರತರಾಗಿದ್ದಾರೆ.

Advertisement

ಕತ್ತೆ ಹಾಲಿನ ಲಾಭ ನೋಡಿ ರೈತರು ಕತ್ತೆಗಳ ಖರೀದಿಗೆ ಮುಂದಾಗಿದ್ದಾರೆ. ತಿಂಗಳಿಗೆ 60 ರಿಂದ 70 ಸಾವಿರ ಲಾಭ ಪಡೆಯಬಹುದು ಎಂದು ರೈತರು ಹೇಳುತ್ತಿದ್ದು, ಹೀಗಾಗಿ ಕತ್ತೆಗಳ ಖರೀದಿ ಜೋರಾಗಿದೆ. ಜನ್ನಿ ಮಿಲ್ಕ್ ಕಂಪನಿಯಿಂದ ಕತ್ತೆಗಳ ಮಾರಾಟ ಆಗುತ್ತಿರುವುದು ತಿಳಿದು ಬಂದಿದೆ.

ಜನ್ನಿ ಮಿಲ್ಕ್ ಕಂಪನಿಯ ರಾಜ್ಯದ ಏಕೈಕ ಕಚೇರಿ ಹೊಸಪೇಟೆಯಲ್ಲಿ ಹೊಂದಿದ್ದು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಮೂಲ ಕಚೇರಿ ಹೊಂದಿದೆ.

ಸಧ್ಯ ವಿಜಯನಗರದ ಜಿಲ್ಲೆಯಾದ್ಯಾಂದ ಕತ್ತೆಗಳ ಖರೀದಿ ಭರಾಟೆ ಸಖತ್ ಸದ್ದು ಮಾಡ್ತಿದೆ. ಅತ್ತೆಗೊಂದು ಕಾಲ, ಸೊಸೆಗೊದು ಕಾಲ ಅನ್ನೋ ಮಾತಿತ್ತು. ಕಾರ್ಯವಾಸಿ ಕತ್ತೆಕಾಲು ಹಿಡಿಯೋದು ಅನ್ನೋ ಗಾದೆಯಂತೆ , ಈಗ ಕತ್ತೆಗೂ ಕಾಲ ಬಂದಿದೆ.

3 ಲಕ್ಷ ಕೊಟ್ರೆ ಮೂರು ಕತ್ತೆಗಳು ಮತ್ತು ಮೂರು ಮರಿ ಕತ್ತೆಯನ್ನು ಕಂಪನಿ ಕೊಡ್ತಿದೆ. 500 ರೂ. ಬಾಂಡ್ ಮೇಲೆ ಅಗ್ರಿಮೆಂಟ್ ಮಾಡಿಸಿಕೊಂಡು 3 ಲಕ್ಷಕ್ಕೆ ಮೂರು ಕತ್ತೆಗಳು, 3 ಮರಿ ಕತ್ತೆಗಳನ್ನು ರೈತರಿಗೆ ಕಂಪನಿ ಮಾರಾಟ ಮಾಡುತ್ತಿದೆ.

ಇನ್ನೂ ಈ ಕತ್ತೆಗಳ ಹಾಲಿಗೆ ಭಾರಿ ಡಿಮ್ಯಾಂಡ್ ಇದ್ದು, ಒಂದು ಕತ್ತೆ ಒಂದು ದಿನಕ್ಕೆ ಎರಡು ಲೀಟರ್ ಹಾಲು ಕೊಡುತ್ತದೆ. ಅದರಲ್ಲಿ 1 ಲೀಟರ್ ಗೆ 2736 ರೂ ಇದ್ದು, ತಿಂಗಳಿಗೆ 60-70 ಸಾವಿರ ರೂಪಾಯಿ ಲಾಭ ಮಾಡಬಹುದು ಅನ್ನೋ ಪ್ಲ್ಯಾನ್ ರೈತರದ್ದಾಗಿದೆ.

ಮೂರು ಕತ್ತೆಗಳು, ಮೂರು ಕತ್ತೆ ಮರಿಗಳು ಸೇರಿ ಒಂದು ಯೂನಿಟ್ ಅಂತ ಹೇಳ್ತಾರೆ. ಇದ್ರಂತೆ 20 ಯುನಿಟ್ ಈಗಾಗಲೇ ಮಾರಾಟ ಮಾಡಲಾಗಿದೆ. ಸದ್ಯ ಕತ್ತೆ ಹಾಲಿನ ಲಾಭ ನೋಡಿ, ರೈತರು ಕತ್ತೆಗಳ ಖರೀದಿ ಭರಾಟೆಯಲ್ಲಿ ಜೋರಾಗಿಯೇ ತೋಡಗಿದ್ದಾರೆ. ರಾಜಸ್ಥಾನ ಮತ್ತು ಹೊರ ರಾಜ್ಯಗಳಿಂದ ಕತ್ತೆಗಳನ್ನು ಇಂಪೋರ್ಟ್ ಮಾಡಿಕೊಂಡು ರೈತರಿಗೆ ನೀಡಲಾಗ್ತಿದೆ.

ಕೆಲ ರೈತರು ಇದರ ಬಗ್ಗೆ ನಮಗೆ ಅನುಮಾನ ಇದೆ ಅಂತ ಹೇಳಿದ್ರೆ, ಇನ್ನೂ ಕೆಲವರು ಇದು ನಮಗೆ ಲಾಭವಿದೆ ಅಂತಿದ್ದಾರೆ. ಇನ್ನೂ ಕತ್ತೆಗಳ ಖರೀದಿಗೆ ರೈತರು ಮುಗಿ ಬೀಳುತ್ತಿದ್ದಂತೆ ನಾವು ಶೀಘ್ರದಲ್ಲೇ ಸೋಪಿನ ಫ್ಯಾಕ್ಟರಿ ಲಾಂಚ್ ಮಾಡುತ್ತೇವೆ ಎಂದು ಜಿನ್ನಿ ಮಿಲ್ಕ್ ಮ್ಯಾನೇಜರ್ ಹೇಳಿದ್ದಾರೆ.

ಇನ್ನೂ ಒಂದು ಅಥವಾ ಎರಡು ವರ್ಷ ನಮಗೆ ನಂಬಿಸಿ ಮೊಸ ಮಾಡಿ ಹೋದ್ರೆ ಯಾರು ಜವಾಬ್ದಾರಿ ಅಂತ ಕೆಲ ರೈತರು ಕೇಳುತ್ತಿದ್ದಾರೆ.

ಈ ಬಗ್ಗೆ ಕಂಪನಿ ಯಾವುದೇ ಪರವಾನಿಗೆ ಪಡೆದಿಲ್ಲ. ಟ್ರೇಡ್ ಲೈಸನ್ಸ್ ಪಡೆದಿಲ್ಲಾ, ನಾವು ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲು ತಿಳಿಸಿದ್ದೇವೆ. ಎಲ್ಲಾ ಮಾಹಿತಿ ಕೇಳಿದ್ದೇವೆ, ನಾವು ಮಾಹಿತಿ ಕೊಡ್ತಿವಿ ಅಂತ ಹೇಳಿದ್ದಾರೆ. ಈ ಬಗ್ಗೆ ಎಚ್ಚರದಿಂದಿರಬೇಕು ಎಂದು ವಿಜಯನಗರ ಜಿಲ್ಲಾಡಳಿತ ಹೇಳ್ತಿದೆ.


Spread the love

LEAVE A REPLY

Please enter your comment!
Please enter your name here