ಬೆಂಗಳೂರು:- ಯುವಕನನ್ನು ಬೆತ್ತಲೆಗೊಳಿಸಿ ನಡುರಸ್ತೆಯಲ್ಲೆ ಅಟ್ಟಾಡಿಸಿ ರೌಡಿಶೀಟರ್ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಜರುಗಿದೆ.
ರಾಜಗೋಪಾಲ ನಗರ ರೌಡಿಶೀಟರ್ ಪವನ್ ಅಲಿಯಾಸ್ ಕಡಬು ಎಂಬಾತ ಹಲವು ಕ್ರೈಂ ಕೇಸ್‌ಗಳಲ್ಲಿ ಭಾಗಿಯಾಗಿದ್ದ. ತುಮಕೂರು ಮೂಲದ ಕಡಬು ಇತ್ತೀಚೆಗೆ ಜೈಲಿನಿಂದ ರಿಲೀಸ್ ಆಗಿದ್ದ. ಈತನ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲೂ ಒಂದು ಕೇಸ್ ಇದ್ದು, ವಾರೆಂಟ್ ಕೂಡ ಇಶ್ಯೂ ಆಗಿದೆ. ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ ಪವನ್ ಅಲಿಯಾಸ್ ಕಡಬು ಪೊಲೀಸರ ಕೈಗೆ ಸಿಗದೇ ಬೆಂಗಳೂರಿನಲ್ಲಿ ಓಡಾಡಿಕೊಂಡಿದ್ದ.
ಮೊನ್ನೆ ಮಧ್ಯರಾತ್ರಿ ಯುವಕನನ್ನು ಹಿಡಿದು ರಾಜಾರೋಷವಾಗಿ ಆತನ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ದಲ್ಲದೆ, ಬೆತ್ತಲೆಯಲ್ಲಿಯೇ ಮನೆಗೆ ಓಡಿಸಿ ವಿಡಿಯೊ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾನೆ. ಹಲ್ಲೆಗೊಳಗಾಗಿರುವ ಯುವಕ ಬೇರೆ ಯಾರೂ ಅಲ್ಲ ಇದೇ ಕಾಮಾಕ್ಷಿಪಾಳ್ಯ ಪೊಲೀಸರ ಇನ್ಫಾರ್ಮರ್ ಎಂದು ಹೇಳಲಾಗಿತ್ತು. ಈ ಹಿಂದೆ ಗಾಂಜಾ ಸೇದುವ ವಿಚಾರಕ್ಕೆ ಯುವಕ, ಪವನ್ @ ಕಡವುಗೆ ಬುದ್ದಿ ಹೇಳಿದ್ದನಂತೆ. ಗಾಂಜಾ ಸೇದಬೇಡ ಅಂದಿದ್ದನಂತೆ. ಇದೇ ವಿಚಾರಕ್ಕೆ ಯುವಕನನ್ನು ಹುಡುಕಿ ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಇನ್ನು ವಿಡಿಯೊ ಮಾಧ್ಯಮಗಳಲ್ಲಿ ಬರುವರೆಗೂ ಈ ವಿಚಾರವೇ ಕಾಮಾಕ್ಷಿಪಾಳ್ಯ ಪೊಲೀಸರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.
ಈ ಘಟನೆ ಆಗಿದ್ದು ಒಂದೆಡೆ ಆದರೆ ಎರಡು ವಿಚಾರಗಳು ಪೊಲೀಸರ ಮೇಲೆ ಹೆಚ್ಚು ಅನುಮಾನ ಹುಟ್ಟಿಸಿವೆ. ತಾವು ಹುಡುಕುತ್ತಿದ್ದ ರೌಡಿಶೀಟರ್ ತಮ್ಮ ಲಿಮಿಟ್ಸ್‌ನಲ್ಲೇ ಓಡಾಡ್ಕೊಂಡಿದ್ದರೂ ಪೊಲೀಸರಿಗೆ ಆತನ ಬಗ್ಗೆ ಅನುಮಾನವೇ ಇರಲಿಲ್ವಾ? ಅಥವಾ ತಮ್ಮ ಇನ್ಫಾರ್ಮರ್ ಮೇಲೆ ಈ ರೀತಿ ಹಲ್ಲೆ ಆಗಿದ್ದರೂ ಒಂಚೂರು ಮಾಹಿತಿ ಸಿಕ್ಕಿಲ್ವಾ? ಅಥವಾ ರೌಡಿಶೀಟರ್ ಬಗ್ಗೆ ಹಲ್ಲೆಗೊಳಗಾದವ್ನೇ ಇನ್ಫಾರ್ಮೇಶನ್ ಕೊಟ್ಟಿದ್ದಕ್ಕೆ ಕಾಮಾಕ್ಷಿಪಾಳ್ಯ ಪೊಲೀಸ್ ಸಿಬ್ಬಂದಿಯೇ ಬಿಟ್ಟು ಹೊಡೆಸಿದ್ರಾ? ಹೀಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ. ರೌಡಿಯ ಕೃತ್ಯಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಇಂತಹ ವಿಕೃತ ಮನಸ್ಸಿನ ಕ್ರಿಮಿನಲ್ಸ್‌ಗೆ ತಕ್ಕ ಶಾಸ್ತಿಯಾಗಬೇಕಿದೆ.