ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸೋಮವಾರ ಪಟ್ಟಣದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸೇರಿ ಈದ್ ಮಿಲಾದ್ ಹಬ್ಬವನ್ನು ಆಚರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪುರಸಭೆ ಹತ್ತಿರ ಮೆರವಣಿಗೆ ಬಂದಾಗ ಬಳ್ಳಾರಿ ಮೊಹಲ್ಲಾ ಜಮಾತ್‌ದ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಹಾಗೂ ಸಾರ್ವಜನಿಕರಿಗೆ ಹಣ್ಣು, ಸಿಹಿ ಮತ್ತು ಕುಡಿಯಲು ನೀರಿನ ಬಾಟಲಿಗಳನ್ನು ವಿತರಿಸಿದರು.
ದಾರಿಯುದ್ದಕ್ಕೂ ಬಾಳೆಹಣ್ಣು, ಶರಬತ್ ಇತ್ಯಾದಿಗಳನ್ನು ಸಮಾಜದ ಅನೇಕರು ವಿತರಿಸಿದ್ದು ಗಮನ ಸೆಳೆಯಿತು. ಈ ವೇಳೆ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರ್ಗಣ್ಣವರ, ಗುರುನಾಥ ದಾನಪ್ಪನವರ, ವಿ.ಜಿ. ಪಡಗೇರಿ, ಮಹೇಶ ಹೊಗೆಸೊಪ್ಪಿನ, ರಾಜಣ್ಣ ಕುಂಬಿ, ಪದ್ಮರಾಜ ಪಾಟೀಲ, ಸೋಮಣ್ಣ ಬೆಟಗೇರಿ, ರಾಜರತ್ನ ಹುಲಗೂರ, ಹರೀಶ ಲಕ್ಷೆö್ಮÃಶ್ವರ, ರಾಮಣ್ಣ ರಿತ್ತಿ, ಬಸವಣ್ಣೆಪ್ಪ ನಂದೆಣ್ಣವರ, ಕಿರಣ ನವಲೆ, ಬಸವರಾಜ ಹಿರೇಮನಿ ಸೇರಿದಂತೆ ಅನೇಕ ಮುಖಂಡರು ಆಗಮಿಸಿ ಜಮಾತ್‌ದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳ್ಳಾರಿ ಮೊಹಲ್ಲಾ ಜಮಾತ್‌ದ ಅಧ್ಯಕ್ಷ ಮಾಬೂಸಾಬ ಹೆಸರೂರ, ನಿಸಾರಅಹ್ಮದ ರಿತ್ತಿ, ಮುನಾಫಸಾಬ್ ರತನಖಾನ, ವದಾರಸಾಬ ಹೆಸರೂರು, ಅಬ್ಜಲ್ ರಿತ್ತಿ, ಜಿಲಾನಿ ಹಣಗಿಕಟ್ಟಿ, ದಾದಾಪೀರ ಬಂಕಾಪೂರ, ದುದ್ದು ರತನಖಾನ್, ಮುನ್ನಾ ಕಮತಗಿ, ನೂರಅಹ್ಮದ ಕಮತಗಿ, ಅಜಿಜ್ ಹೆಸರೂರ, ನಜೀರಸಾಬ ರಿತ್ತಿ, ಇಮ್ರಾನ್ ಹೆಸರೂರ, ಹಜರೆಸಾಬ ನಧಾಪ್ ಸೇರಿದಂತೆ ಅನೇಕರಿದ್ದರು.