ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ವಿವಿಧ ಸಮಾಜಿಕ ಭದ್ರತಾ ಯೋಜನೆಯಲ್ಲಿ ಫಲಾನುಭವಿಗಳಾದ ಕಣಗಿಹಾಳ ಗ್ರಾಮದ ಶರಣವ್ವ ಪೂಜಾರ, ಲಕ್ಕುಂಡಿ ಗ್ರಾಮದ ಈರಮ್ಮ ವಡ್ಡರ, ಲಕ್ಕುಂಡಿ ಗ್ರಾಮದ ನಿರ್ಮಲ ಕೊಪ್ಪಳ, ಲಿಂಗದಾಳ ಗ್ರಾಮದ ರಾಚಯ್ಯ ಚೌಕಿಮಠ, ಕೋಟುಮುಚಗಿ ಗ್ರಾಮದ ಭೀಮವ್ವ ಜಂತಲಿ, ಮಮತಾ ನದಾಫ, ಕುರ್ತಕೋಟಿ ಗ್ರಾಮದ ಬೂದವ್ವ ಚುಂಗಿನ, ಅಸುಂಡಿ ಗ್ರಾಮದ ಯಲ್ಲವ್ವ ಆರೇರ, ಅಂತೂರ ಬೆಂತರು ಗ್ರಾಮದ ಸುಮಾ ಪೂಜಾರ, ಶಂಕ್ರಪ್ಪ ಇಳಕಳ್, ಲಕ್ಕುಂಡಿ ಗ್ರಾಮದ ಮಂಜುನಾಥ ತೊಳಸಿ, ಭರಮವ್ವ ಹಮ್ಮಿಗಿ, ಅಶ್ವನಿ ತಳವಾರ ಅವರುಗಳಿಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲರು ಆದೇಶ ಪ್ರತಿ ವಿತರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಖನಿಜ ನಿಗಮದ ಅಧ್ಯಕ್ಷರು ಮತ್ತು ರೋಣ ಶಾಸಕ ಜಿ.ಎಸ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿ.ಪಂ ಸಿಇಒ ಭರತ್ ಎಸ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್ ಮೀನಾ ಹಾಜರಿದ್ದರು.


