ಕಾಡುವ ಶಕ್ತಿಗಿಂತ ಕಾಪಾಡುವ ಶಕ್ತಿ ದೊಡ್ಡದು : ರಂಭಾಪುರಿ ಶ್ರೀಗಳು

0
Full Moon Public Awareness Ceremony
Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಜಗದ ಜನರ ಬದುಕಿನಲ್ಲಿ ಬರುವ ಸಂಕಷ್ಟಗಳು ಮತ್ತು ಸಮಸ್ಯೆಗಳು ಹಲವಾರು. ಅನೇಕ ಸಮಸ್ಯೆಗಳಿಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ. ಆದರೆ ಜಗತ್ತು ಬೆಳೆಯುವುದು ನಿಂತಿಲ್ಲ.

Advertisement

ಆದ್ದರಿಂದ ಕಾಡುವ ಶಕ್ತಿಗಿಂತ ಕಾಪಾಡುವ ಶಕ್ತಿ ಬಲು ದೊಡ್ಡದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಬುಧವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಹುಣ್ಣಿಮೆಯ ಜನ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಒಂದು ಕೆಲಸ ಕೈಗೆತ್ತಿಕೊಂಡಾಗ ಅದಕ್ಕೆ ಅಡೆತಡೆಗಳೆದುರಾದಾಗ ಮಾಡುವ ಪ್ರಯತ್ನವನ್ನು ನಿಲ್ಲಿಸಬಾರದು. ನೀರಿಗಿಳಿದ ಮೇಲೆ ಚಳಿಯಾಗಲಿ, ಮಳೆಯಾಗಲಿ ಲೆಕ್ಕಿಸದೇ ಹೆಜ್ಜೆ ಹಾಕಿದರೆ ಪ್ರತಿಫಲ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಸೋತೆ ಎಂದು ಹಿಂಜರಿಯದೇ ಮುಂದಿಟ್ಟ ಹೆಜ್ಜೆ ಹಿಂದಿಡಬಾರದು. ಮುಂದಿಟ್ಟ ಆ ಹೆಜ್ಜೆ ನಿನ್ನ ಜೀವನದ ಇತಿಹಾಸವನ್ನೇ ಸೃಷ್ಟಿಸುವ ಹೆಜ್ಜೆ ಯಾಕಾಗಿರಬಾರದು? ತಾಳ್ಮೆ ಮತ್ತು ಮೌನ ಅತ್ಯದ್ಭುತ ಆಯುಧಗಳು. ತಾಳ್ಮೆ ಮಾನಸಿಕವಾಗಿ ಗಟ್ಟಿಗೊಳಿಸಿದರೆ ಮೌನ ಭಾವನಾತ್ಮಕವಾಗಿ ಗಟ್ಟಿಗೊಳಿಸುತ್ತದೆ. ಒಂದು ಹೂವು ಇನ್ನೊಂದು ಹೂವಿನೊಂದಿಗೆ ಸ್ಪರ್ಧೆಗಿಳಿಯುವುದಿಲ್ಲ. ಸುಂದರವಾಗಿ ಅರಳುವುದಷ್ಟೇ ಅವುಗಳ ಕೆಲಸ.

ಹಾಗೆಯೇ ನಮ್ಮ ವ್ಯಕ್ತಿತ್ವವು ಹೂವಿನಂತಾದರೆ ಬದುಕು ಸಾರ್ಥಕ. ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನದ ಅನಂತ ಜ್ವಲಂತ ಸಮಸ್ಯೆಗಳಿಗೆ ಆಧ್ಯಾತ್ಮದ ಜ್ಞಾನವನ್ನು ಬೋಧಿಸುವುದರ ಮೂಲಕ ಜನ ಸಮುದಾಯದ ಬದುಕಿಗೆ ಬೆಳಕು ತೋರಿದ್ದಾರೆ ಎಂದರು.

ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ಮಲಘಾಣ ಹಿರೇಮಠದ ರೇಣುಕ ಶಿವಾಚಾರ್ಯ ಸ್ವಾಮಿಗಳು, ಅ.ಭಾ.ವೀ.ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ. ಲೋಕೇಶ, ದಾವಣಗೆರೆ ವೀರೇಶ ದಂಪತಿಗಳು, ಕಡೂರು ತಾಲೂಕಿನ ಹಾಲುಮತ ಸಮಾಜದ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಈ ಪವಿತ್ರ ಧರ್ಮ ಸಮಾರಂಭದಲ್ಲಿ ಶ್ರೀ ಪೀಠದ ಲೆಕ್ಕಾಧಿಕಾರಿ ಸಂಕಪ್ಪನವರ, ಚಂದ್ರಶೇಖರ, ರೇಣುಕಸ್ವಾಮಿ, ರವಿ ಹಿರೇಮಠ, ಪ್ರಭುಸ್ವಾಮಿ ಮಠದ, ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಶಾಸ್ತಿçಗಳು ಹಿರೇಮಠ ಮತ್ತು ಗುರುಕುಲ ಸಾಧಕರು ಇದ್ದರು. ಇದೇ ಸಂದರ್ಭದಲ್ಲಿ `ರಂಭಾಪುರಿ ಬೆಳಗು’ ಸೆಪ್ಟಂಬರ್ ಸಂಚಿಕೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.

ಪ್ರಾತಃಕಾಲ ಶ್ರೀ ಜಗದ್ಗುರು ರಂಭಾಪುರಿ ಪೀಠದ ಎಲ್ಲ ದೈವಗಳಿಗೆ ಹುಣ್ಣಿಮೆಯ ನಿಮಿತ್ತ ವಿಶೇಷ ಹೂವಿನ ಅಲಂಕಾರ, ಪೂಜೆಗಳು ಜರುಗಿದವು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

ನೇತೃತ್ವ ವಹಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನುಷ್ಯ ಖಾಲಿ ಕೈಯಲ್ಲಿ ಬರುತ್ತಾನೆ. ಖಾಲಿ ಕೈಯಲ್ಲಿ ಹೋಗುತ್ತಾರೆ ಎಂದು ಬಹಳಷ್ಟು ಜನರು ತಿಳಿದಿರುತ್ತಾರೆ. ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆ ಬರುತ್ತಾನೆ. ಹೋಗುವಾಗ ಕರ್ಮದ ಫಲದೊಂದಿಗೆ ಹೋಗುತ್ತಾನೆ. ಪ್ರೀತಿ ಮತ್ತು ಸಹಾನುಭೂತಿ ತುಂಬಿದ ಹೃದಯ ಆಂತರಿಕ ಶಕ್ತಿ ಇಚ್ಛಾಶಕ್ತಿ ಜೀವನದ ಸಂತೋಷ ನೆಮ್ಮದಿಗೆ ಮುಖ್ಯವೆಂಬುದನ್ನು ಯಾರೂ ಮರೆಯಬಾರದೆಂದರು.


Spread the love

LEAVE A REPLY

Please enter your comment!
Please enter your name here