ನವದೆಹಲಿ: ಸುಪ್ರೀಂ ಕೋರ್ಟ್ನ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿ ಅಮೆರಿಕನ್ ಕಂಪನಿ ರಿಪ್ಪಲ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದ ಕ್ರಿಪ್ಟೋಕರೆನ್ಸಿ XRP ಅನ್ನು ಪ್ರಚಾರ ಮಾಡುವ ವೀಡಿಯೊಗಳು ಹಾಕಿದ್ದಾರೆ. ಹೌದು ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿದ್ದಾರೆ.
ಬಳಿಕ ಅಮೆರಿಕದ ಮೂಲದ ರಿಪ್ಪಲ್ ಲ್ಯಾಬ್ಸ್ ಜಾಹೀರಾತು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಈ ಪೈಕಿ ಕ್ರಿಪ್ಟೋಕರೆನ್ಸಿ, ಎಕ್ಸ್ಆರ್‌ಪಿ ಸೇರಿದಂತೆ ಇತರ ಕೆಲ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಹ್ಯಾಕರ್ಸ್ ತಂಡ ಈ ಕೃತ್ಯ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ರಿಪ್ಪಲ್ ಲ್ಯಾಬ್ಸ್ ವಿಡಿಯೋಗಳನ್ನು ಎಲ್ಲೆಡೆ ಪೋಸ್ಟ್ ಮಾಡುತ್ತಿರುವ ಕುರಿತು ಇತ್ತೀಚೆಗೆ ಯೂಟ್ಯೂಬ್ ವಿರುದ್ಧವೇ ಕಾನೂನು ಹೋರಾಟ ಆರಂಭಿಸಿದೆ.
ಹಲವು ಹ್ಯಾಕರ್ಸ್ ತಮ್ಮ ಚಾನೆಲ್ ವಿಡಿಯೋಗಳನ್ನು ಬೇರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡುತ್ತಿರುವ ಕುರಿತು ದೂರು ನೀಡಿದೆ. ತಾಂತ್ರಿಕ ತಂಡ ಸುಪ್ರೀಂ ಕೋರ್ಟ್ ಚಾನೆಲ್ ತಾತ್ಕಾಲಿಕ ಸ್ಥಗಿತಗೊಳಿಸಿದೆ. ಈ ಕುರಿತು ಬ್ಯಾಕ್ಎಂಡ್ ಟೀಮ್ ಕಾರ್ಯಪ್ರವೃತ್ತರಾಗಿದ್ದು, ಶೀಘ್ರದಲ್ಲೇ ತಾಂತ್ರಿಕ ಸಮಸ್ಯೆ ಬಗೆಹರಿಸಿ ಎಂದಿನಂತೆ ಯೂಟ್ಯೂಬ್ ಚಾನೆಲ್ ಕಾರ್ಯಪ್ರವೃತ್ತಗೊಳ್ಳಲಿದೆ.