ದಾನಿಗಳ ಪಾತ್ರ ಬಹುಮುಖ್ಯವಾಗಿದೆ : ಭಾಷಾಸಾಬ್ ಮಲ್ಲಸಮುದ್ರ

0
A successful Eid Milad event
Spread the love

ವಿಜಯಸಾಕ್ಷಿ ಸುದ್ದಿ, ಗದಗ : 2024ರ ಮುಹಮ್ಮದ್ ಪೈಗಂಬರ್ ಜಯಂತಿಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದೇವೆ. ಪ್ರತಿವರ್ಷ ಈದ್ ಮಿಲಾದ್ ಕಮಿಟಿ ಮಾಡಿದಾಗಲೆಲ್ಲ ಎಲ್ಲರೂ ಒಂದಿಲ್ಲೊಂದು ನೋವಿನಿಂದ ಹೊರ ಹೋಗುತ್ತಿದ್ದರು. ಆದರೆ, ಈ ಬಾರಿಯ ಎಲ್ಲ ಸದಸ್ಯರು ಯಾವುದೇ ಫಲಾಪೇಕ್ಷೆಗಳಿಲ್ಲದೆ ಖುಷಿಯಿಂದ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಪ್ರಾರಂಭದಿಂದಲೂ ಪರ-ವಿರೋಧ ಚರ್ಚೆಗಳು ಇದ್ದರೂ ಕೂಡ ಎಲ್ಲರನ್ನೂ ಗಮನಕ್ಕೆ ತೆಗೆದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದೇವೆ ಎಂದು 2024ರ ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಭಾಷಾಸಾಬ್ ಮಲ್ಲಸಮುದ್ರ ಹೇಳಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಈದ್ ಮಿಲಾದ್ ಕಮಿಟಿಯಿಂದ ಖರ್ಚು-ವೆಚ್ಚಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮಾಜ ಕಟ್ಟುವ ನಿಟ್ಟಿನಲ್ಲಿ ಪೈಗಂಬರ್ ಜಯಂತಿ ಆಚರಿಸಿದ್ದೇವೆ.

ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ದಾನಿಗಳ ಪಾತ್ರ ಬಹುಮುಖ್ಯವಾಗಿದೆ. ಅವರ ಶ್ರಮದ ಹಣವನ್ನು ವ್ಯರ್ಥ ಮಾಡದೇ ಎಲ್ಲಾ ಲೆಕ್ಕಪತ್ರವನ್ನು ಕರೀಂ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಹಿರಿಯರ ಮಾರ್ಗದರ್ಶನದಂತೆ ಸಮಾಜಕ್ಕೆ ಉತ್ತಮ ಅಡಿಪಾಯ ಹಾಕುವ ಕೆಲಸವನ್ನು ಮಾಡಿದ್ದೇವೆ ಎಂದರು.

ನಮ್ಮ ಸಮಾಜದ ಕಾರ್ಯಕ್ರಮಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಕೆಲವು ದಾನಿಗಳು ಮುಂದೆ ಬಂದು ತಮ್ಮ ಹೆಸರನ್ನು ಬಹಿರಂಗಪಡಿಸದೆ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ. ಜಗತ್ತಿನಲ್ಲಿ ತಪ್ಪು ಮಾಡಬಾರದು. ತಪ್ಪು ಮಾಡಿದರೆ ಮುಂದೆ ನಾವು ಅಲ್ಲಾಹು ಬಳಿ ಹೋದಾಗ ಉತ್ತರ ಕೊಡಬೇಕಾಗುತ್ತದೆ. ಹಾಗಾಗಿ ಯಾವುದೇ ಕಾರ್ಯ ಮಾಡಿದರೂ ಕೂಡ ನಿಸ್ವಾರ್ಥದಿಂದ ಮಾಡಬೇಕು. ಈಗಾಗಲೇ ನಾವು ಪೈಗಂಬರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ. ಇದರ ಲೆಕ್ಕಪತ್ರಗಳ ಅಡಾವ್ ನಮ್ಮ ಸಮಾಜದ ಮುಂದೆ ಇಡುತ್ತಿದ್ದೇವೆ ಎಂದರು.

ಪೈಗಂಬರ್ ಜಯಂತಿ ಅಂಗವಾಗಿ ಬಹಿರಂಗ ಸಭೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಮುಂಬರುವ ವರ್ಷದಲ್ಲಿ ಯಾರೇ ಕಾರ್ಯಕ್ರಮ ಮಾಡಿದರೂ ನಾವು ಅವರಿಗೆ ಸಹಾಯ-ಸಹಕಾರ ನೀಡುತ್ತೇವೆ. ಸಮಾಜದ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡಬೇಕು ಎನ್ನುವುದು ನಮ್ಮ ಕನಸಾಗಿದೆ. ಸಮುದಾಯ ಭವನ ನಿರ್ಮಾಣವಾದರೆ ಸಮಾಜಕ್ಕೆ ಆಸ್ತಿ ಮಾಡಿದಂತಾಗುತ್ತದೆ. ಮುಂದೆ ನಮಗೆ ಯಾವುದೇ ಜವಾಬ್ದಾರಿ ನೀಡಿದರೂ ಕೂಡ ಯಶಸ್ವಿಯಾಗಿ ನಡೆಸಲು ನಾವು ಸಿದ್ಧರಿದ್ದೇವೆ. ನಮಗೆ ಸ್ಥಾನ ಮುಖ್ಯವಲ್ಲ, ಸಮಾಜದ ಕೆಲಸ ಮುಖ್ಯವಾಗಿರುತ್ತದೆ. ಸ್ಥಾನಕ್ಕೆ ಅಪೇಕ್ಷೆ ಪಡದೆ ಕೆಲಸ ನಿರ್ವಹಿಸಲು ಈಗಿರುವ ಎಲ್ಲಾ ಕಮಿಟಿಯವರು ಸಿದ್ದರಿದ್ದೇವೆ ಎಂದು ತಮ್ಮ ಸಮುದಾಯಕ್ಕೆ ಭಾಷಾಸಾಬ್ ಮಲ್ಲಸಮುದ್ರ ಭರವಸೆ ನೀಡಿದರು.

ಜಮಾ ಮತ್ತು ಖರ್ಚಾದ ಮೊತ್ತ

* ಕಮಿಟಿಯ ಹಣ: 84,000 ರೂ.
* ಸಾರ್ವಜನಿಕರಿಂದ ಸಂಗ್ರಹವಾದ ಹಣ: 3,32,044 ರೂ.
* ಒಟ್ಟು ಹಣ: 4,16,044 ರೂ.
* ಒಟ್ಟು ಖರ್ಚು: 4,02,700 ರೂ.
* ನಿವ್ವಳ ಉಳಿತಾಯ: 13,344 ರೂ.

 


Spread the love

LEAVE A REPLY

Please enter your comment!
Please enter your name here