ಪ್ರತಿಭೆಗಳು ಅರಳುವುದೇ ಗ್ರಾಮೀಣ ಭಾಗದಲ್ಲಿ : ಸುಧಾಕರ

0
Higher Education Minister Sudhakar awarded gold medal to Pooja village priest
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಧಾರವಾಡದಲ್ಲಿ ಮಂಗಳವಾರ ನಡೆದ ಕರ್ನಾಟಕ ವಿಶ್ವ ವಿದ್ಯಾಲಯದ 74ನೇ ಘಟಿಕೋತ್ಸವದಲ್ಲಿ ಪಟ್ಟಣದ ಪೂಜಾ ವಿನಾಯಕ ಗ್ರಾಮಪುರೋಹಿತಗೆ ಉನ್ನತ ಶಿಕ್ಷಣ ಸಚಿವ ಸುಧಾಕರ ಸುವರ್ಣ ಪದಕ ಪ್ರದಾನ ಮಾಡಿ ಗೌರವಿಸಿದರು.

Advertisement

ಪಟ್ಟಣದಲ್ಲಿ ಡಾ. ಕಾಳೆಯವರ ಆಸ್ಪತ್ರೆ ಹತ್ತಿರ ಕಿರಾಣಿ ಅಂಗಡಿಯನ್ನಿರಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ವಿನಾಯಕ ಮತ್ತು ಲಕ್ಷ್ಮಿ ಗ್ರಾಮಪುರೋಹಿತರ ಮಗಳು ಪೂಜಾ ನರೇಗಲ್ಲದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿನ ಸ್ನಾತಕೋತ್ತರ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ. ತನ್ನ ಪದವಿಯಲ್ಲಿ ಉನ್ನತ ಸಾಧನೆ ಮಾಡಿರುವ ಪೂಜಾ ಚಿನ್ನದ ಪದಕಕ್ಕೆ ಭಾಜನಳಾಗಿದ್ದಳು. ಮಂಗಳವಾರ ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಉನ್ನತ ಶಿಕ್ಷಣ ಸಚಿವ ಸುಧಾಕರ ಮಾತನಾಡಿ, ಪ್ರತಿಭೆಗಳು ಅರಳುವುದು ಗ್ರಾಮೀಣ ಭಾಗದಲ್ಲಿಯೇ. ಇಂದು ಇಲ್ಲಿ ಪದಕ ಪಡೆದವರಲ್ಲಿ ಹೆಚ್ಚಿನವರು ಗ್ರಾಮೀಣ ಭಾಗದಿದಂದ ಬಂದವರಾಗಿದ್ದಾರೆ. ಅವರೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕವಿವಿದ ಕುಲಪತಿಗಳು, ಕುಲಸಚಿವರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಅಭಿನಂದನೆ: ಸುವರ್ಣ ಪದಕವನ್ನು ಸ್ವೀಕರಿಸಿದ ಪೂಜಾ ಗ್ರಾಮಪುರೋಹಿತ ಅವರನ್ನು ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು, ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಮತ್ತು ಸಿಬ್ಬಂದಿಯವರು, ಪಟ್ಟಣದ ಶ್ರೀ ದತ್ತ ಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಮತ್ತು ಎಲ್ಲ ಸದಸ್ಯರು, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ, ರೋಣ ತಾಲೂಕಾ ಅಧ್ಯಕ್ಷ ಗುರುರಾಜ ಕುಲಕರ್ಣಿ, ಗಜೇಂದ್ರಗಡ ತಾಲೂಕಾ ಅಧ್ಯಕ್ಷ ಗಾಡಗೋಳಿ, ಗದಗ ತಾಲೂಕಾ ಅಧ್ಯಕ್ಷ ದತ್ತಣ್ಣ ಜೋಷಿ, ನರೇಗಲ್ಲ ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ಮತ್ತು ಸದಸ್ಯರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

ನಮ್ಮ ಮಗಳು ಇಂಥದ್ದೊಂದು ಅಗಾಧವಾದ ಸಾಧನೆಯನ್ನು ಮಾಡುತ್ತಾಳೆಂದು ನಾವು ನಿರೀಕ್ಷಿಸಿರಲಿಲ್ಲ. ಸತತ ಓದು ಅವಳಿಗೆ ಈ ಚಿನ್ನದ ಪದಕವನ್ನು ತಂದುಕೊಟ್ಟಿದೆ. ಇದರಿಂದ ನಮ್ಮ ಮನೆತನದ ಕೀರ್ತಿ ಹೆಚ್ಚಿದಂತಾಗಿದೆ. ಅವಳ ಉನ್ನತ ಭವಿಷ್ಯಕ್ಕೆ ನಾವು ಎಲ್ಲ ರೀತಿಯ ಸಹಕಾರ, ಪ್ರೋತ್ಸಾಹ ನೀಡುತ್ತೇವೆ.
– ಲಕ್ಷ್ಮಿ, ವಿನಾಯಕ ಗ್ರಾಮಪುರೋಹಿತ.

ನನ್ನ ಅಧ್ಯಯನದಲ್ಲಿ ನಾನು ಚಿನ್ನದ ಪದಕ ಸಂಪಾದಿಸಿರುವುದಕ್ಕೆ ಶ್ರೀ ಗುರು ದತ್ತಾತ್ರೇಯ, ನನ್ನ ತಂದೆ-ತಾಯಿಗಳ ಆಶೀರ್ವಾದ ಮತ್ತು ಸಹಕಾರ ಕಾರಣ. ಈ ಗೌರವವನ್ನು ನಾನು ಎಂದಿಗೂ ಕಾಪಾಡಿಕೊಂಡು ಮುನ್ನಡೆಯುತ್ತೇನೆ. ಉಪನ್ಯಾಸಕಿ ಆಗುವ ಕನಸಿರುವ ನನಗೆ ನನ್ನಿಂದ ಪಾಠ ಕಲಿಯುವ ಮಕ್ಕಳೆಲ್ಲರೂ ಚಿನ್ನದ ಪದಕ ಗಳಿಸುವಂತೆ ಮಾಡುವುದೇ ನನ್ನ ಗುರಿಯಾಗಿದೆ
-ಪೂಜಾ ಗ್ರಾಮಪುರೋಹಿತ.
ಚಿನ್ನದ ಪದಕ ಪುರಸ್ಕೃತೆ.


Spread the love

LEAVE A REPLY

Please enter your comment!
Please enter your name here