ವಿಜಯಸಾಕ್ಷಿ ಸುದ್ದಿ, ಗದಗ : ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಜನರಿಗೆ ಆಮಿಷ ತೋರಿಸಿ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಜನಹಿತಕಾರ್ಯ ಮರೆತು ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಕುಟುಂಬ ಹಿತಕ್ಕೋಸ್ಕರ ಜನಸಾಮಾನ್ಯರ ಆಸ್ತಿ-ಸಂಪತ್ತನ್ನು ಲೂಟಿ ಮಾಡುವ ಮೂಲಕ ರಾಜ್ಯಕ್ಕೆ ಅಪಚಾರ ಮಾಡಿದ್ದಾರೆ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದರು.
ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕಾನೂನು ಬಾಹಿರವಾಗಿ ಪರಶಿಷ್ಟ ಜಾತಿ ಜನರ ಭೂಮಿ ಖರೀದಿಸಿದ್ದಲ್ಲದೆ ತಮ್ಮ ಸ್ಥಾನಮಾನದ ಪ್ರಭಾವ ಬಳಸಿ ಮುಡಾದಿಂದ ಅಕ್ರಮವಾಗಿ ಸೈಟ್ ಪಡೆಯುವ ಮುಖಾಂತರ ತಮ್ಮ ಸಮಾಜವಾದಿ ಮುಖವಾಡವನ್ನು ಕಳಚಿಕೊಂಡಿದ್ದಾರೆ. ರಾಜ್ಯಪಾಲರ, ನ್ಯಾಯಾಲಯದ ಆದೇಶಗಳಿಗೆ ತಲೆಬಾಗಿ ಕೂಡಲೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ಹುಬ್ಬಳ್ಳಿ-ಗದಗ ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ಕೈಗೊಂಡು, ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ಉದ್ದೇಶಿಸಿ ಮುಖಂಡ ಅಶೋಕ ನವಲಗುಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ಮಾತನಾಡಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ನಾಗರಾಜ ಕುಲಕರ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ಕೀರೇಶ ರಟ್ಟಿಹಳ್ಳಿ, ಜಗನ್ನಾಥಸಾ ಭಾಂಡಗೆ, ಭೀಮಸಿಂಗ್ ರಾಥೋಡ್, ವಿಜಯಕುಮಾರ್ ಗಡ್ಡಿ, ಸಿದ್ದಣ್ಣ ಪಲ್ಲೇದ, ಶಶಿಧರ್ ದಿಂಡೂರ್, ನಗರಸಭಾ ಸದಸ್ಯರಾದ ವಿನಾಯಕ ಮಾನ್ವಿ, ಪ್ರಕಾಶ್ ಅಂಗಡಿ, ವಿದ್ಯಾವತಿ ಗಡಿಗಿ, ವಿಜಯಲಕ್ಷ್ಮಿ ದಿಂಡೂರ, ಲಕ್ಷ್ಮಿ ಕಾಕಿ, ಮುತ್ತು ಮುಸಿಗೇರಿ, ಚಂದ್ರು ತಡಸದ, ಬೂದಪ್ಪ ಹಳ್ಳಿ, ಬದ್ರೆಶ ಕುಸ್ಲಾಪುರ, ಸುನಿಲ ಮಹಾಂತಶೆಟ್ಟರ, ಬಸವಣ್ಣಪ್ಪ ಚಿಂಚಲಿ, ಸಂತೋಷ ಅಕ್ಕಿ, ಪ್ರಶಾಂತ್ ನಾಯ್ಕರ್, ಅನಿಲ ಮುಳುಗುಂದ್, ದೇವೇಂದ್ರಪ್ಪ ಹೂಗಾರ್, ವಿಜಯಲಕ್ಷ್ಮಿ ಮಾನ್ವಿ, ರಮೇಶ್ ಸಜಗಾರ, ಸ್ವಾತಿ ಅಕ್ಕಿ, ಅಶೋಕ್ ಕರೂರು, ಸುರೇಶ್ ಚಿತ್ತರಗಿ, ಶಂಕರ್ ಕಾಕಿ, ರೇಖಾ ಬಂಗಾರಶೆಟ್ಟರ, ಯೋಗೇಶ್ವರಿ ಬಾವಿಕಟ್ಟಿ, ಅಮರ್ನಾಥ್ ಗಡಗಿ, ಶಿವು ಹಿರೇಮನಿಪಾಟೀಲ, ನವೀನ ಕೊಟೆಕಲ್, ವೆಂಕಟೆಶ ಹಬೀಬ, ವಗ್ಗನವರ, ಲಕ್ಷ್ಮಣ್ ದೊಡ್ಮನಿ, ರಾಜು ಹೊಂಗಲ್, ಡಿ.ಬಿ. ಕರಿಗೌಡ್ರು, ಜಾನು ಲಮಾಣಿ, ಶಕ್ತಿ ಕತ್ತಿ, ಸಂತೋಷ್ ಜಾವೂರ್, ಶಾರದಾ ಸಜ್ಜನ್ ಪಾರ್ವತಿ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಸಂಪುಟ ಸದಸ್ಯರು, ಸಿದ್ದರಾಮಯ್ಯ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು, ಕಳೆದ ಒಂದೂವರೆ ವರ್ಷದಲ್ಲಿ ಯಾವುದೇ ಹೊಸ ಕಾಮಗಾರಿಗಳು ನಡೆಯುತ್ತಿಲ್ಲ. ಕೆಲವು ಇಲಾಖೆ ನೌಕರರ ಸಂಬಳ ಆಗುತ್ತಿಲ್ಲ, ರಾಜ್ಯ ಅಭಿವೃದ್ಧಿಯಿಂದ ಹಿಂದೆ ಬಿದ್ದಿದೆ. ರಾಜ್ಯವನ್ನು ಕೊಳ್ಳೆ ಹೊಡೆದದ್ದು ಸಾಕು, ಜನ ಬೀದಿಗಿಳಿದು ಹೋರಾಟ ಮಾಡುವ ಮುನ್ನವೇ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.