ವಿಜಯಸಾಕ್ಷಿ ಸುದ್ದಿ, ಗದಗ : ಗದಗ ನಗರದ ವೀರಶೈವ ಲೈಬ್ರರಿ ಹತ್ತಿರ ಸುದರ್ಶನ ಚಕ್ರ ಯುವ ಮಂಡಳ ವತಿಯಿಂದ ಪ್ರತಿಷ್ಠಾಪನೆ ಮಾಡಿರುವ ಗದಗ ಜಿಲ್ಲೆಯ ಹಿಂದೂ ಮಹಾಗಣಪತಿಯ 21ನೇ ದಿನವಾದ ಶುಕ್ರವಾರ ಬೆಳಿಗ್ಗೆ ಮಾಜಿ ಸಚಿವ ಸಿ.ಸಿ. ಪಾಟೀಲ ಹಾಗೂ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಸುದರ್ಶನ ಚಕ್ರ ಯುವ ಮಂಡಳ, ಹಿಂದೂ ಮಹಾಗಣಪತಿ ಸಮಿತಿಯ ಗೌರವ ಅಧ್ಯಕ್ಷ ಎಸ್.ಎಚ್. ಶಿವನಗೌಡ್ರ, ಸುದರ್ಶನ ಚಕ್ರ ಯುವ ಮಂಡಳದ ಮತ್ತು ಹಿಂದೂ ಮಹಾಗಣಪತಿ ಸಮಿತಿಯ ಅಧ್ಯಕ್ಷ ಸುಧೀರ ಕಾಟಿಗಾರ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹಬೀಬ, ಬಿಜೆಪಿಯ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ, ರವಿ ಮಾಳೆಕೊಪ್ಪ, ಅಶ್ವಿನಿ ಜಗತಾಪ, ವಂದನಾ ವೇರಣೆಕರ, ನಗರಸಭೆಯ ಸದಸ್ಯರಾದ ಹುಲಿಗೆಮ್ಮ ಹಬೀಬ, ಶಿವರಾಜ ಹಿರೇಮನಿಪಾಟೀಲ, ಕುಮಾರ ಮಾರನಬಸರಿ, ಸುರೇಶ ಮೇದಾರ, ಪ್ರಶಾಂತ ನಾಯ್ಕರ, ಮಹೇಶ ದಾಸರ, ರಮೇಶ ಸಜ್ಜಗಾರ ಮುಂತಾದವರು ಇದ್ದರು.