ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಬೀಚಿ ಬಳಗದ ಆಶ್ರಯದಲ್ಲಿ ಸೆ.28ರಂದು ಸಂಜೆ 4ಕ್ಕೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಬಳಗದ ಸಂಚಾಲಕ ಈಶ್ವರ ಬೆಟಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ನರೇಗಲ್ಲ ಹಿರೇಮಠದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ವಹಿಸಲಿದ್ದು, ಸಮಾರಂಭದಲ್ಲಿ ತಾಲೂಕಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ, ಶ್ರೀ ಅನ್ನದಾನೇಶ್ವರ ಪಿಯು ಕಾಲೇಜಿನ ಉಪನ್ಯಾಸಕ ಎಫ್.ಎನ್. ಹುಡೇದ, ತಾಲೂಕಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಶ್ರೀ ಬಸವೇಶ್ವರ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ, ನಂದಿವೇರಿ ಮಠದ ಕಪ್ಪತ್ತಗಿರಿ ಫೌಂಡೇಶನ್ ಸಾಹಿತ್ಯ ವೇದಿಕೆ ಉತ್ತಮ ಶಿಕ್ಷಕ ಪುರಸ್ಕೃತ ಶ್ರೀ ಅನ್ನದಾನೇಶ್ವರ ಬಾಲಿಕೆಯರ ಪ್ರೌಢಶಾಲೆಯ ಶಿಕ್ಷಕ ಬಿ.ಡಿ. ಯರಗೊಪ್ಪ, ಕನ್ನಡ ಎಂ.ಎ.ದಲ್ಲಿ ಬಂಗಾರದ ಪದಕ ಪುರಸ್ಕೃತೆ ಪೂಜಾ ವಿನಾಯಕ ಗ್ರಾಮಪುರೋಹಿತ ಮತ್ತು ಡಿಜಿ2024ರ ಛಾಯಾಶ್ರೀ ಪ್ರಶಸ್ತಿ ಪುರಸ್ಕೃತ, ಪಟ್ಟಣದ ಮಂಜುನಾಥ ಫೋಟೋ ಸ್ಟುಡಿಯೋದ ಮಾಲೀಕ ಮಲ್ಲಯ್ಯ ಗುಂಡಗೋಪುರಮಠ ಅವರನ್ನು ಸನ್ಮಾನಿಸಲಾಗುವುದೆಂದು ಬೆಟಗೇರಿ ತಿಳಿಸಿದ್ದಾರೆ.