ಬೆಂಗಳೂರು: ಚುನಾವಣೆ ಬಾಂಡ್ ಸೀತಾರಾಮನ್ ಪರ್ಸನಲ್ ಅಕೌಂಟ್ಗೆ ಹೋಗಿದೆಯಾ? ಎಂದು ಕಾಂಗ್ರೆಸ್ ವಿರುದ್ಧ H.D.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನನ್ನ ಮುಗಿಸಲು ಹೊರಟಿದ್ದಾರೆ ಅಂತ ಹೇಳ್ತೀರಿ. ನಮಗ್ಯಾಕೆ ಹೊಟ್ಟೆಕಿಚ್ಚು, ಅಧಿಕಾರ ಯಾರಿಗೂ ಶಾಶ್ವತವಾಗಿ ಉಳಿಯುವುದಿಲ್ಲ.
ನೀವು ಮಾಡಿದ ಕೆಲಸವಷ್ಟೇ ಶಾಶ್ವತವಾಗಿ ಉಳಿಯುತ್ತದೆ. ಚುನಾವಣೆ ಬಾಂಡ್ ಸೀತಾರಾಮನ್ ಪರ್ಸನಲ್ ಅಕೌಂಟ್ಗೆ ಹೋಗಿದೆಯಾ?. ನಿಮ್ಮ ರೀತಿ ಅವರು ಲಪಟಾಯಿಸಿಕೊಂಡಿಲ್ಲ. ಪವರ್ ಇದೆ, ಡಿನೋಟಿಫಿಕೇಷನ್ ಬಳಿಕ ಪ್ರಕರಣಗಳ ಬಗ್ಗೆಯೂ ಚರ್ಚೆ ಮಾಡಿ ಎಂದರು.
ಇನ್ನೂ ಕೃಷ್ಣಬೈರೇಗೌಡರೇ ಈ ಬಗ್ಗೆ ವ್ಯಾತ್ಯಾಸ ಏನಿದೆ ಅಂತ ನೋಡಿ. ನೀವು ಕಾನೂನು ಸಚಿವರಾಗಿ ಕೆಲಸ ಮಾಡಿದ್ದವರು. 1997-2022ರ ವರೆಗೆ ಕಡತಗಳನ್ನ ತೆಗಿದು ನೋಡಿ. ನನ್ನ ಹೆಸರೇ ಇಲ್ಲ. ಕಡತ ಬಂದಾಗ ಸಹಿ ಮಾಡಿದ್ದೇನೆ. ಡಿನೋಟಿಫಿಕೇಷನ್ ಆದೇಶ ಮಾಡಿಲ್ಲ. ಎಲ್ಲಾ ರೀತಿಯ ಮಾಹಿತಿ ತೆಗೆದುಕೊಂಡು ಜವಾಬ್ದಾರಿ ಹೇಗೆ ನಿಭಾಯಿಸಬೇಕು ನೋಡಿ ಅಂತ ಹೇಳಿದ್ದೀನಿ ಅಷ್ಟೆ ಎಂದು ಹೇಳಿಕೆ ನೀಡಿದರು.