ಪ್ರಶಸ್ತಿಯಿಂದ ಜಿಲ್ಲೆಯ ಘನತೆ ಹೆಚ್ಚಿದೆ : ಬಸವಣ್ಣೆಯ್ಯ ಹಿರೇಮಠ

0
Kudos to Kidiyur who won the Mohare Manantaraya award
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಳೆದ ಐದು ದಶಕಗಳಿಂದ ಸ್ವಂತ ಮುದ್ರಣ ಯಂತ್ರದಲ್ಲಿ ಮುದ್ರಣಗೊಂಡು ಪಕ್ಷಾತೀತವಾಗಿ ಸುದ್ದಿಗಳನ್ನು ಬಿತ್ತರಿಸುತ್ತಿರುವ ನವೋದಯ ಪತ್ರಿಕೆ ಹಾಗೂ ಸಂಪಾದಕರಾದ ರಾಜೀವಲೋಚನ ಕಿದಿಯೂರ ಅವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ ನೀಡಿರುವುದು ಪ್ರಶಸ್ತಿಯ ಘನತೆ ಹೆಚ್ಚಿಸಿದೆ ಎಂದು ಸೋಮೇಶ ಹಿರೇಮಠ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ ಹೇಳಿದರು.

Advertisement

ರಾಜ್ಯ ಸರಕಾರದಿಂದ ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತ ನವೋದಯ ಪತ್ರಿಕೆಯ ಸಂಪಾದಕ ರಾಜೀವಲೋಚನ ಕಿದಿಯೂರ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಿ ಮಾತನಾಡಿದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿ 15-02-1976ರಂದು ಸಣ್ಣ ಪ್ರಮಾಣದಲ್ಲಿ ಅಚ್ಚುಮೊಳೆಯ ಮುದ್ರಣಯಂತ್ರದಲ್ಲಿ ಆರಂಭಗೊಂಡ ನವೋದಯ ಪತ್ರಿಕೆ ಈಗ ವ್ಯವಸ್ಥಾಪಕ ಸಂಪಾದಕರಾದ ದೀಪಕ್ ಕಿದಿಯೂರ ಅವರ ನೇತೃತ್ವದಲ್ಲಿ ಬಣ್ಣದ ಪುಟಗಳಲ್ಲಿ ಮುದ್ರಣಗೊಳ್ಳುತ್ತಿದೆ. ಉತ್ತರ ಕರ್ನಾಟಕದ ಮನೆ ಮಾತಾಗಿರುವ ಪತ್ರಿಕೆ ಕನ್ನಡ ಭಾಷೆ, ಸಾಹಿತ್ಯ, ಪರಂಪರೆ, ಸಂಸ್ಕೃತಿಯ ಪ್ರತೀಕವಾಗಿ ಜನಮನ ಗೆದ್ದಿದೆ ಎಂದರು.

ಗದಗ ಜಿಲ್ಲಾ ಬಿಜೆಪಿ ಮುಖಂಡ ಮಹೇಶ ದಾಸರ ಮಾತನಾಡಿ, ಗದಗ ಜಿಲ್ಲೆಯ ಘನತೆ, ಪತ್ರಿಕಾ ಮೌಲ್ಯವನ್ನು ಕಳೆದ 50 ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ನವೋದಯ ಪತ್ರಿಕೆಯ ಸಂಪಾದಕರಿಗೆ ಪ್ರಶಸ್ತಿ ದೊರೆತಿರುವುದು ಗದಗ ಜನತೆಗೆ ಹೆಮ್ಮೆ ಮೂಡಿಸಿದೆ ಎಂದರು.

ಕರವೇ ಪ್ರವೀಣ ಶೆಟ್ಟಿ ಬಣದ ವೆಂಕಟೇಶ ಆರ್.ಬೇಲೂರ ಮಾತನಾಡಿ, ಕನ್ನಡ ಭಾಷೆಯ ಉಳಿವು ಹಾಗೂ ಬೆಳವಣಿಗೆಗಾಗಿ ಶ್ರಮಿಸುತ್ತ, ಕಳೆದ ಅರ್ಧ ಶತಮಾನದಿಂದಲೂ ನಿರಂತರವಾಗಿ ಕರ್ನಾಟಕದ ಜನತೆಗೆ ಅರಿವು ಮೂಡಿಸುತ್ತಿರುವ ನವೋದಯ ಪತ್ರಿಕೆಯ ಸೇವೆಯನ್ನು ಗುರುತಿಸಿ ಸರಕಾರ ಮೊಹರೆ ಹಣಮಂತರಾಯ ಪ್ರಶಸ್ತಿಯನ್ನು ಸಂಪಾದಕರಾದ ರಾಜೀವಲೋಚನ ಕಿದಿಯೂರರಿಗೆ ನೀಡಿರುವುದು ಸ್ತುತ್ಯಾರ್ಹ. ಕನ್ನಡಪರ ಸಂಘಟನೆಗಳ ಹೋರಾಟಗಳಿಗೆ ಸ್ಪೂರ್ತಿ ತುಂಬಿದ ಪತ್ರಿಕೆಯಾಗಿದೆ ಎಂದರು.

ಸೋಮೇಶ ಹಿರೇಮಠ ಸೇವಾ ಪ್ರತಿಷ್ಠಾನ, ನಾಗಾವಿ, ವೆಂಕಟೇಶ ದಾಸರ ಅಭಿಮಾನಿಗಳ ಬಳಗ, ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣ, ರಾಷ್ಟ್ರೀಯ ಅಹಿಂದ ಸಂಘಟನೆ, ಮುಂಡರಗಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಮುಖಂಡರು, ಪದಾಧಿಕಾರಿಗಳು ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತ ರಾಜೀವಲೋಚನ ಕಿದಿಯೂರ ಅವರನ್ನು ಸನ್ಮಾನಿಸಿ, ಗೌರವಿಸಿದರು.

ಕರವೇ ಪ್ರವೀಣಶೆಟ್ಟಿ ಬಣದ ಕಾನೂನು ಸಲಹೆಗಾರರಾದ ಮಂಜುನಾಥ ಶಾಂತಗೇರಿ, ಗದಗ ತಾಲೂಕು ಅಧ್ಯಕ್ಷ ಹನಮಂತಸಾ ಶಿದ್ಲಿಂಗ್, ರಾಷ್ಟ್ರೀಯ ಅಹಿಂದ ಸಂಘಟನೆಯ ಜೋಸೆಫ್ ಓದೋಜಿ, ಬಾಬಾಜಾನ ಡಾಲಾಯತ ಮುಂತಾದವರು ಉಪಸ್ಥಿತರಿದ್ದರು.

ಅಹಿಂದ ರಾಷ್ಟ್ರೀಯ ಸಂಘಟನೆಯ ರಾಜ್ಯ ಕಾರ್ಯದರ್ಶಿ, ನ್ಯಾಯವಾದಿ ವಿಲಾಸ ಕೊಪ್ಪಳ ಮಾತನಾಡಿ, ಇಂದಿನ ಆಧುನಿಕ, ಸ್ಪರ್ಧಾತ್ಮಕ ದಿನಗಳಲ್ಲಿ ಬಹುತೇಕ ಪತ್ರಿಕೆಗಳು ಕಮರ್ಷಿಯಲ್ ಆಗಿರುವಾಗ ಯಾವುದೇ ಫಲಾಪೇಕ್ಷೆ ಇಲ್ಲದೇ, ರಾಜ್ಯದಲ್ಲಿ ನಡೆದಿರುವ ಕಾರ್ಯಕ್ರಮಗಳು, ಸುದ್ದಿಗಳನ್ನು ಅಚ್ಚುಕಟ್ಟಾಗಿ ನೀಡುತ್ತಿರುವ ನವೋದಯ ಪತ್ರಿಕೆ ಜನಮೆಚ್ಚಿದ ಪತ್ರಿಕೆಯಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here