ಹಣಕಾಸು ಸಚಿವೆಯ ರಾಜೀನಾಮೆ ಅನಿವಾರ್ಯವಾಗಿದೆ: ಜೈರಾಮ್ ರಮೇಶ್

0
Spread the love

ನವದೆಹಲಿ: ಹಣಕಾಸು ಸಚಿವೆಯ ರಾಜೀನಾಮೆ ಅನಿವಾರ್ಯವಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚೆಂದ ಕೊಡಿ ದಂಧೆ ತಗೊಳ್ಳಿ. ಟೆಂಡರ್ ತಗೊಳ್ಳಿ ಚೆಂದ ಕೊಡಿ. ಈ ಎರಡು ಮಾರ್ಗಗಳ ಮೂಲಕ ಬಿಜೆಪಿ ಹಣ ಪಡೆದಿದೆ.

Advertisement

ಇದನ್ನು ನಾವು ಲಂಚ ಎನ್ನಬಹುದು. ಎಫ್‌ಐಆರ್ ಮೇಲೆ ಇನ್ನೊಂದು ಮಾರ್ಗ ಉಲ್ಲೇಖಿಸಬಹುದು. ಪೋಸ್ಟ್ ರೇಡ್, ಹಫ್ತಾ ವಸೂಲಿ ಅಂತಾ ಕರೆಯಬಹುದು. ಬಹಳಷ್ಟು ಕಂಪನಿಗಳ ಮೇಲೆ ಇಡಿ ರೇಡ್ ಆದ್ಮೇಲೆ ಬಾಂಡ್ ಖರೀದಿಸಿವೆ. ನಕಲಿ ಕಂಪನಿಗಳ ಮೂಲಕವೂ ಬಿಜೆಪಿ ಚುನಾವಣಾ ಬಾಂಡ್ ಪಡೆದಿದೆ.

ಬಿಜೆಪಿ ಐದೂವರೆ ವರ್ಷದಲ್ಲಿ 6,000 ಕೋಟಿಗೂ ಅಧಿಕ ಹಣ ಸಂಗ್ರಹಿಸಿದೆ. ಧಮ್ಕಿ ಹಾಕಿ ಬಾಂಡ್ ಖರೀದಿಸುವಂತೆ ಮಾಡಲಾಗಿದೆ. ಇದರ ಬಗ್ಗೆ ಎಸ್‌ಐಟಿ ತನಿಖೆ ಆಗಲೇಬೇಕಿದೆ. ಜೆಪಿಸಿ ತನಿಖೆಗೆ ನಾವು ಒತ್ತಾಯ ಮಾಡಿದ್ದೆವು. ನಾವು ಹೇಳಿದಂತೆ ಬೆಂಗಳೂರಿನಲ್ಲಿ ಎಫ್‌ಐಆರ್ ಆಗಿಲ್ಲ. ಕೋರ್ಟ್ ನಿರ್ದೇಶನದಂತೆ ಎಫ್‌ಐಆರ್ ಆಗಿದೆ. ಕೇಂದ್ರ ಹಣಕಾಸು ಸಚಿವೆ ರಾಜೀನಾಮೆ ನೀಡಬೇಕು. ಹಣಕಾಸು ಸಚಿವೆಯ ರಾಜೀನಾಮೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here