ನೆಲಮಂಗಲ: ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮದಲ್ಲಿ ರಾತ್ರೋ ರಾತ್ರಿ ಹಸುಗಳ ಕಳ್ಳತನ ನಡೆದಿದೆ.
Advertisement
ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 2 ಲಕ್ಷ ಬೆಲೆ ಬಾಳುವ ಹಸುಗಳನ್ನು ಕದ್ದು ಖದೀಮರು ಎಸ್ಕೇಪ್ ಆಗಿದ್ದಾರೆ. ಹಾಲು ಕೊಡುತ್ತಿದ್ದ ಹಸು ಜೊತೆ ಕರುಗಳನ್ನು ಸಹ ಕಳ್ಳತನ ಮಾಡಲಾಗಿದೆ.
ರೈತ ತಿಮ್ಮಪ್ಪಯ್ಯನಿಗೆ ಸೇರಿದ ಹಸುಗಳು ಇವಾಗಿದ್ದು, ಘಟನೆಯಿಂದ ನೊಂದು ರೈತ ಕಣ್ಣೀರು ಹಾಕಿದ್ದಾನೆ. ಇನ್ನೂ ನೆಲಮಂಗಲ ತಾಲೂಕಿನಲ್ಲಿ ಹಸುಗಳ ಕಳ್ಳತನ ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.