ನೇತ್ರದಾನ ಮಾಡಿ ಅಂಧರಿಗೆ ಬೆಳಕಾಗಿ : ಎಸ್.ಎಚ್. ಶಿವನಗೌಡ್ರ

0
Free eye check up camp
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪರೋಪಕಾರದಿಂದ ಪುಣ್ಯ ಪ್ರಾಪ್ತಿ ಯಾಗುವುದು ಎಂದು ಸುದರ್ಶನ ಚಕ್ರ ಯುವ ಮಂಡಳ ಮತ್ತು ಹಿಂದೂ ಮಹಾಗಣಪತಿ ಸಮಿತಿಯ ಗೌರವಾಧ್ಯಕ್ಷ ಎಸ್.ಎಚ್. ಶಿವನಗೌಡ್ರ ಹೇಳಿದರು.

Advertisement

ಅವರು ಗದಗ ನಗರದ ವೀರಶೈವ ಲೈಬ್ರರಿ ಬಳಿಯ ಸುದರ್ಶನ ಚಕ್ರ ಯುವ ಮಂಡಳ ವತಿಯಿಂದ ಪ್ರತಿಷ್ಟಾಪನೆ ಅಂಗವಾಗಿ ಲಯನ್ಸ್ ಕ್ಲಬ್ ಗದಗ, ಗೋಕುಲ ಫೌಂಡೇಶನ್ ಗದಗ, ಜಯ ಪ್ರಿಯಾ ಆಸ್ಪತ್ರೆ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಆಯ್ಕೆಯಾದವರ ಶಸ್ತ್ರಚಿಕಿತ್ಸೆಗೊಳಗಾದವರನ್ನು ಬೀಳ್ಕೊಟ್ಟು ಮಾತನಾಡಿದರು.

ಎಲ್ಲಾ ದಾನಕ್ಕಿಂತ ನೇತ್ರದಾನ ಶ್ರೇಷ್ಠ. ದೇಹದಲ್ಲಿನ ಜೀವ ಹೋಗಿ ಮಣ್ಣಿನಲ್ಲಿ ಮಣ್ಣಾಗುವ ಮೊದಲು ಕಣ್ಣು ದಾನಮಾಡಿದರೆ ಅಂಧರ ಬಾಳಿಗೆ ದಾರಿದೀಪವಾದ ಪುಣ್ಯ ನಿಮಗೆ ದೊರಕುತ್ತದೆ ಎಂದರು.

ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಒಟ್ಟು 120 ಜನರನ್ನು ತಪಾಸಣೆ ಮಾಡಲಾಗಿತ್ತು. ಅದರಲ್ಲಿ 60 ಜನರನ್ನು ನೇತ್ರ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಅವರಲ್ಲಿ 28 ಜನರಿಗೆ ಸೆ.26ರಂದು ಹುಬ್ಬಳ್ಳಿಯ ಜಯಪ್ರಿಯಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಕನ್ನಡಕ ಮತ್ತು ಔಷಧ ನೀಡಲಾಗಿದ್ದು, ಇನ್ನುಳಿದ 32 ಜನರ ಶಸ್ತ್ರಚಿಕಿತ್ಸೆ ಮುಂದಿನ ಹಂತದಲ್ಲಿ ಮಾಡಲಾಗುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸುದರ್ಶನ ಚಕ್ರ ಯುವ ಮಂಡಳ ಮತ್ತು ಹಿಂದೂ ಮಹಾಗಣಪತಿ ಸಮಿತಿಯ ಅಧ್ಯಕ್ಷರಾದ ಸುಧೀರ ಕಾಟಿಗಾರ, ರಾಘವೇಂದ್ರ ಹಬೀಬ, ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ ಸಾಲಿ, ದತ್ತುಸಾ ಬೇವಿನಕಟ್ಟಿ, ರಮೇಶ ಶಿಗ್ಲಿ, ಶಂಕರ ದಹಿಂಡೆ, ರವಿ ಮಾಳೆಕೊಪ್ಪ, ಅಶ್ವಿನಿ ಜಗತಾಪ, ವಂದನಾ ವೇರಣೆಕರ, ನಗರಸಭೆಯ ಸದಸ್ಯರಾದ ಹುಲಿಗೇಮ್ಮ ಹಬೀಬ, ಕೌಶಲ್ಯಬಾಯಿ ಬದಿ, ಶೋಭಾ ಭಾಂಡಗೆ, ರೇಖಾ ಬೆಟಗೇರಿ ಸೇರಿದಂತೆ ಕಾರ್ಯಕರ್ತರು ಇದ್ದರು.


Spread the love

LEAVE A REPLY

Please enter your comment!
Please enter your name here