ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇತ್ತೀಚಿಗೆ ನಡೆದ ಬಿಎಸ್ಸಿ ಪರೀಕ್ಷೆಯಲ್ಲಿ ಪಟ್ಟಣದ ಬಿಸಿಎನ್ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ದರ್ಶನ ಮುದಗಲ್ (ಶೇ.87) ಕಾಲೇಜಿಗೆ ಪ್ರಥಮ, ನಸ್ರೀನ್ಭಾನು ಉಪ್ಪಾರ (ಶೇ.84) ದ್ವಿತೀಯ ಮತ್ತು ಸಂಗೀತಾ ಚಿಣಗಿ (ಶೇ.84) ತೃತೀಯ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಭವ್ಯಶ್ರೀ ಸಿದ್ಧಪ್ಪನವ ಶೇ.83, ಸಂಕೀನಾ ಇಂಗಳಗಿ ಶೇ.82, ಸಹನಾ ಜಾಲಣ್ಣವರ ಶೇ.82, ಸುದೀಪ ದೇವಿಹೊಸೂರ ಶೇ.81, ಕವನಾ ಪಾಟೀಲ ಶೇ.81, ಅಕ್ಷಯ ಮೆಡ್ಲೇರಿ ಶೇ.80, ಮಾಬುಸಾಬ ಅತ್ತಿಗೇರಿ ಶೇ.80, ಪ್ರಶಾಂತ ಬೋರಟ್ಟಿ ಶೇ.77, ವಿಕಾಸ ಭಜಂತ್ರಿ ಶೇ.77, ಅಕ್ಷಯ ಭಜಂತ್ರಿ ಶೇ.77, ಅಭಿಷೇಕ ಹಿರೇಮಠ ಶೇ.73, ವಿಖ್ಯಾತ ದೈವಜ್ಞಾಚಾರ್ ಶೇ.73, ಮುತ್ತಣ್ಣ ಅರಳಿಕಟ್ಟಿ ಶೇ.67ರಷ್ಟು ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಬಸವರಾಜ ನೆಲವಗಿ, ನಿರ್ದೇಶಕರಾದ ಲೋಹಿತ ನೆಲವಗಿ, ಪ್ರಾಚಾರ್ಯ ಮಂಜುನಾಥ ಬಂಡಿವಾಡ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.