ಚಿತ್ರದುರ್ಗ: ಹಿಂದೂ ಮಹಾಗಣಪತಿ ಶೋಭಾಯಾತ್ರೆ ದಿನ ಯುವಕನಿಗೆ ಚಾಕು ಇರಿದ ಘಟನೆ ಚಿತ್ರದುರ್ಗದ ಸೀಬಾರ ಸಮೀಪದಲ್ಲಿ ನಡೆದಿದೆ. ಸುದೀಪ್ (22) ಎಂಬಾತ ಚಾಕು ಇರಿತದಿಂದ ಗಂಭೀರ ಗಾಯಗೊಂಡ ಯುವಕನಾಗಿದ್ದು, ಚಿಕಿತ್ಸೆಗಾಗಿ ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸುದೀಪ್ ಹಾಗೂ ಸ್ನೇಹಿತರು ಬೈಕ್‌ನಲ್ಲಿ ಬರುತ್ತಿದ್ದಾಗ, ದರ್ಶನ್ & ಗ್ಯಾಂಗ್ ಬೈಕ್ ಅಡ್ಡಗಟ್ಟಿ ಕೃತ್ಯ ಎಸಗಿದ್ದಾರೆ.
ಘಟನೆಯಲ್ಲಿ ಬಿಳಿಚೋಡು ಮೂಲದ ಸುದೀಪ್, ದೇವರಾಜ್, ಅಜಯ್‌ಗೆ ಗಾಯವಾಗಿದೆ. ಚಾಕು ಇರಿದು ಕೊಲೆ ಬೆದರಿಕೆ ಹಾಕಿ ದರ್ಶನ್ & ಗ್ಯಾಂಗ್ ಎಸ್ಕೇಪ್ ಆಗಿದೆ. ಚಾಕು ಇರಿತಕ್ಕೆ ನಿಖರ ಕಾರಣ ಲಭ್ಯವಿಲ್ಲ. ಸದ್ಯ BNS 126/2, 352, 115/2, 189/2, 191/2, 109,190 ಕಲಂ ಅಡಿಯಲ್ಲಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



