ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪ್ರತಿಯೊಂದು ಸಾಧನೆಗೂ ಕಠಿಣ ಪರಿಶ್ರಮ ಅತ್ಯಗತ್ಯವಾಗಿದೆ ಎಂದು ಅಂಜುಮನ್ ಕಮಿಟಿ ಅಧ್ಯಕ್ಷ ತಾಜುದ್ದಿನ ಕಿಂಡ್ರಿ ಹೇಳಿದರು.
Advertisement
ಪಟ್ಟಣದ ದಾವಸಾಬ ನರಗುಂದ ಗೌರವ ಡಾಕ್ಟರೇಟ್ ಪದವಿ ಪಡೆದ ನಿಮಿತ್ತ, ಅಗ್ನಿವೀರ ಹುದ್ದೆಗೆ ನೆಮಕಗೊಂಡ ಶಶಾಂಕ ಕೋಳಿವಾಡ ಇವರಿಗೆ ಖಿದ್ಮತ್ ಎ ಮಿಲ್ಲತ್ ಗ್ರೂಪ್ ವತಿಯಿಂದ ಸನ್ಮಾನಿಸಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸಾಧನೆ ಮಾಡುವ ಛಲವಿರುತ್ತದೆ. ಅದನ್ನು ಕಠಿಣ ಪರಿಶ್ರಮದಿಂದ ಸಾಧಿಸಿದಾಗ ಮಾತ್ರ ಸಾಧನೆಯ ಶಿಖರ ಏರಬಹುದು ಎಂದರು.
ಅಂಜುಮನ್ ಕಮಿಟಿ ಉಪಾಧ್ಯಕ್ಷ ಹಮೀದ ಮುಜಾವಾರ, ಹೈದರಲಿ ಖವಾಸ, ಮುನ್ನಾ ಡಾಲಾಯತ, ದಾವಲಸಾಬ ಲಕ್ಷ್ಮೇಶ್ವರ, ಹುಶೇನ್ ಅಕ್ಕಿ, ಜಾಫರ್ ಲಾಡಸಾಬನವರ, ದಾವುದ ಜಮಾಲ ಮುಂತಾದವರಿದ್ದರು.