Renukaswamy Murder Case: ನಟ ದರ್ಶನ್‌ ನೋಡಲು ಜೈಲಿಗೆ ಬಂದ ಪುತ್ರ ವಿನೀಶ್!

0
Spread the love

ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​​ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಜಾಮೀನು​ ಮೂಲಕ ಹೊರಬರಲು ಪರದಾಡುತ್ತಿದ್ದಾರೆ. ಇನ್ನೂ ನಟ ದರ್ಶನ್‌ನನ್ನ ನೋಡಲು ಪುತ್ರ ವಿನೀಶ್ ಆಗಮಿಸಿದ್ದಾರೆ. ಹೌದು, ತಾಯಿ ವಿಜಯಲಕ್ಷ್ಮಿ ಜೊತೆ ವಿನೀಶ್ ಜೈಲಿಗೆ ಆಗಮಿಸಿದ್ದಾನೆ.

Advertisement

ದರ್ಶನ್ ಜೈಲು ಸೇರಿ 3 ತಿಂಗಳಿಗಿಂತ ಅಧಿಕವಾಗಿದೆ. ಕಾನೂನು ಸಮರದ ಕುರಿತು ಚರ್ಚಿಸಲು ಪ್ರತಿ ವಾರ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಬಳ್ಳಾರಿ ಜೈಲಿಗೆ ಭೇಟಿ ನೀಡುತ್ತಿದ್ದರು. ಈ ಬಾರಿ ಅಮ್ಮನ ಜೊತೆ ಪುತ್ರ ವಿನೀಶ್ ಕೂಡ ಭೇಟಿ ನೀಡಿದ್ದಾರೆ. ಈ ವೇಳೆ, ದರ್ಶನ್‌ಗೆ ಅಗತ್ಯವಿರುವ ಬಟ್ಟೆ,

ಬೆಡ್‌ಶಿಟ್ ಮತ್ತು ಬೇಕರಿ ತಿನಿಸುಗಳೊಂದಿಗೆ 2 ಬ್ಯಾಗ್ ಹಿಡಿದು ಆಪ್ತರೊಂದಿಗೆ ಪತ್ನಿ, ಪುತ್ರ ಜೈಲಿಗೆ ಆಗಮಿಸಿದ್ದಾರೆ. ಇನ್ನೂ ಬಳ್ಳಾರಿಗೆ ಜೈಲಿಗೆ ಭೇಟಿ ಕೊಟ್ಟ ವೇಳೆ, ಅಪ್ಪ ದರ್ಶನ್‌ರನ್ನು ನೋಡಿ ವಿನೀಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಗನನ್ನು ಸಂತೈಸಿ, ಯೋಗ ಕ್ಷೇಮ ವಿಚಾರಿಸಿದ್ದಾರೆ. ಬಳಿಕ ಪತ್ನಿ ವಿಜಯಲಕ್ಷ್ಮಿ ಜೊತೆ ದರ್ಶನ್ ಕಾನೂನು ಸಮರದ ಬಗ್ಗೆ ಚರ್ಚಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here