ಹಾವೇರಿ: ಚಲಿಸುತ್ತಿದ್ದ ಬಸ್ಸಿನಿಂದ ಟೈರ್ʼಗಳು ಕಳಚಿ ಬಿದ್ದಿದ್ದು, ಚಾಲಕನ ಸಾಹಸದಿಂದ ಭಾರಿ ಅನಾಹುತ ತಪ್ಪಿರುವ ಘಟನೆ ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
Advertisement
40 ಜನ ಪ್ರಯಾಣಿಕರನ್ನು ಕರೆದುಕೊಂಡು ಹುಬ್ಬಳ್ಳಿ ಕಡೆಯಿಂದ ಹಾವೇರಿಗೆ ಬರುತ್ತಿದ್ದ ವೇಳೆ ಬಸ್ಸಿನ ಹಿಂಭಾಗದ ಎರಡು ಚಕ್ರಗಳು ಕಳಚಿ ಬಿದ್ದಿದ್ದು, ಕಲ್ಲಪ್ಪ ಸುಳ್ಳದ ಎಂಬ ಚಾಲಕನಿಂದ ಜಾಗೃತಿಯಿಂದ ದುರಂತ ತಪ್ಪಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.