ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿ ಜಯಂತಿಯ ನಿಮಿತ್ತ ತಂಬಾಕು ಮುಕ್ತ ಅಭಿಯಾನ ಹಮ್ಮಕೊಂಡು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಶಾಲಾ/ಕಾಲೇಜು ಅವರಣದ ನಿಗದಿತ ಅಂತರದಲ್ಲಿ ಇರುವ ಅಂಗಡಿ /ಪಾನ್‌ಶಾಪ್‌ಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯ್ಯಾದಂತ ಕೋಟ್ಪಾ ಕಾಯ್ದೆಯಡಿ ಒಟ್ಟು 1629 ಪ್ರಕರಣಗಳನ್ನು ದಾಖಲಿಸಿದರಲ್ಲದೆ, ನಿಷೇಧಿತ ಪ್ರದೇಶದಲ್ಲಿ ರೂಢಿಗತವಾಗಿ ತಂಬಾಕು ಪದಾರ್ಥಗಳನ್ನು ಮಾರುವ ವ್ಯಕ್ತಿಗಳ ಮೇಲೆ ಬಿ.ಎನ್.ಎಸ್.ಎಸ್. 129ರ ಕಾಯ್ದೆ ಅಡಿ 24 ಪ್ರಕರಣಗಳನ್ನು ದಾಖಲಿಸಿಕೊಂಡು ತಂಬಾಕು ಮುಕ್ತ ಅಭಿಯಾನವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.