ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಭಾರತದಲ್ಲಿ ಗುರು-ಶಿಷ್ಯ ಸಂಬಂಧಕ್ಕೆ ವಿಶಿಷ್ಠವಾದ ಮಹತ್ವವಿದೆ. ಈ ಸಂಬಂಧದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅವುಗಳಲ್ಲಿ ಸದ್ಗುರು ಶ್ರೀ ಬ್ರಹ್ಮ ಚೈತನ್ಯರು ಮತ್ತು ಸದ್ಗುರು ಶ್ರೀ ಬ್ರಹ್ಮಾನಂದರ ಅವಿನಾಭಾವ ಸಂಬಂಧವನ್ನು ವರ್ಣಿಸಲು ಪದಗಳು ಸಿಗುವುದಿಲ್ಲ.
ಬ್ರಹ್ಮಾನಂದ ಗುರುಗಳನ್ನು ನೋಡಿಯೇ ಗುರುಗಳ ಸೇವೆ ಹೇಗೆ ಮಾಡಬೇಕೆಂಬುದನ್ನು ಕಲಿಯಬೇಕೆಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಅನಸೂಯಾ ಮಹಿಳಾ ಮಂಡಳದ ವತಿಯಿಂದ ಆಚರಿಸಲಾದ ಬ್ರಹ್ಮಾನಂದ ಗುರುಗಳ ನಿರ್ಯಾಣದ ಬುಕೀಟು ಅರ್ಪಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.
ತಮ್ಮ ಶಿಷ್ಯ ಬ್ರಹ್ಮಾನಂದರ ಮೂಲಕ ಬ್ರಹ್ಮ ಚೈತನ್ಯರು ಅದ್ಹೇಗೆ ಕರ್ನಾಟಕದಲ್ಲಿ ರಾಮನಾಮ ಜಪದ ಸವಿಯನ್ನು ಹಚ್ಚಿಸಿದರು ಎಂಬುದನ್ನು ತಿಳಿಯಲು ಸದ್ಗುರು ಶ್ರೀ ಬ್ರಹ್ಮಾನಂದರ ಚರಿತ್ರೆ ಗ್ರಂಥವನ್ನು ಓದಬೇಕು.
ಅದರಲ್ಲಿನ ಸಂಗತಿಗಳು ನಮ್ಮನ್ನು ಭಾವನಾ ಲೋಕಕ್ಕೆ ಕರೆದೊಯ್ಯುತ್ತವೆ. ಅವರ ಪ್ರಾರಂಭಿಕ ಜೀವನವನ್ನು ಕಂಡಾಗ ಇಂತಹ ವ್ಯಕ್ತಿ ಮುಂದೆ ಹೇಗೆ ಈ ನಾಡನ್ನೇ ಆಳಿದ ಆಧ್ಯಾತ್ಮಿಕ ದೊರೆಯಾದರು ಎಂಬುದು ಅಗಾಧವೆನ್ನಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಶೇಷಗಿರಿ ಕುಲಕರ್ಣಿ, ಎ.ಜಿ. ಕುಲಕರ್ಣಿ, ವಿನಾಯಕ ಗ್ರಾಮಪುರೋಹಿತ, ಆನಂದ ಕುಲಕರ್ಣಿ, ಬಾಬು ಕಾಳೆ, ಮಂಜುನಾಥ ಗ್ರಾಮಪುರೋಹಿತ, ಆನಂದ ಕಾಳೆ, ಸನ್ಮತಿ ಸದರಜೋಷಿ, ವಿಮಲಾಬಾಯಿ ಗ್ರಾಮಪುರೋಹಿತ, ರಾಜಶ್ರೀ ಕುಲಕರ್ಣಿ, ಶೋಭಾ ಕುಲಕರ್ಣಿ, ಪ್ರತೀಕ್ಷಾ ಕುಲಕರ್ಣಿ, ಸೀಮಾ ಕೊಂಡಿ, ಪಲ್ಲವಿ ಗ್ರಾಮಪುರೋಹಿತ, ಶ್ರೇಯಾ ನಾಡಿಗೇರ, ಜ್ಯೋತಿ ನಾಡಿಗೇರ, ಲಕ್ಷಿö್ಮ ಗ್ರಾಮಪುರೋಹಿತ, ನಿಖಿತಾ ಗ್ರಾಮಪುರೋಹಿತ, ಪರಿಮಳಾ ಗ್ರಾಮಪುರೋಹಿತ, ಅಪೇಕ್ಷಾ ಕುರಂದವಾಡ, ವಿದ್ಯಾ ಗ್ರಾಮಪುರೋಹಿತ, ಸುಶೀಲಾ ಪುರಾಣಿಕ, ಅನಿತಾ ಗ್ರಾಮಪುರೋಹಿತ, ಅರ್ಚನಾ ಕುಲಕರ್ಣಿ, ಪ್ರಭಾ ರಾಯಭಟ್ಟನವರ, ಜಯಶ್ರೀ ಗ್ರಾಮಪುರೋಹಿತ, ಪ್ರಿಯಾ ಕುಲಕರ್ಣಿ, ದೀಪಾ ಕುಲಕರ್ಣಿ, ಸ್ಫೂರ್ತಿರಾಣಿ ಕುಲಕರ್ಣಿ, ಪೂಜಾ ಗ್ರಾಮಪುರೋಹಿತ, ಅನಘಾ ಗ್ರಾಮಪುರೋಹಿತ, ಅನುಪಮಾ ಗ್ರಾಮಪುರೋಹಿತ ಮುಂತಾದವರಿದ್ದರು.