Homecultureದಾಂಡಿಯಾ ಕಾರ್ಯಕ್ರಮ ನಾಳೆ

ದಾಂಡಿಯಾ ಕಾರ್ಯಕ್ರಮ ನಾಳೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಸಿದ್ಧಲಿಂಗನಗರದ ಶ್ರೀ ಬನ್ನಿಮಹಾಂಕಾಳಿ ಸೇವಾ ಟ್ರಸ್ಟ್ ವತಿಯಿಂದ ಅ. 2ರಿಂದ ನಮ್ಮೂರ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಉತ್ಸವದ ಅಂಗವಾಗಿ ಅ.6ರ ಸಂಜೆ 6.30ಕ್ಕೆ ದಾಂಡಿಯಾ ಕಾರ್ಯಕ್ರಮ ಜರುಗಲಿದೆ.

ಅ. 10ರಂದು ದುರ್ಗಾಷ್ಟಮಿ ನಿಮಿತ್ತ ಬೆಳಿಗ್ಗೆ 6.30ಕ್ಕೆ ದುರ್ಗಾಮಾತಾ ದೌಡದಂಡಿ ಜರುಗುವುದು. ಬಾಲ ಮಕ್ಕಳನ್ನು ನವದುರ್ಗೆಯರನ್ನಾಗಿ ಶೃಂಗರಿಸಿ ಮಧ್ಯಾಹ್ನ 12 ಗಂಟೆಗೆ ಶ್ರೀ ಅಂಬಾಭವಾನಿ ದೇವಸ್ಥಾನಕ್ಕೆ ಉಡಿ ತುಂಬಲು ಹೋಗಲಾಗುವುದು. ನಂತರ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.

ಅ. 11ರಂದು ಮಹಾನವಮಿ, ಆಯುಧ ಪೂಜೆ, ಅ. 12ರ ಸಚಿಜೆ 4.30ಕ್ಕೆ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದಿಂದ ಪಾಲಕಿ ಮೆರವಣಿಗೆ, ಬಸವ ಮಂಟಪದ ಎದುರಿನ ನಾಗದೇವತಾ ಮಂಟಪದಲ್ಲಿ ಸೀಮೋಲ್ಲಂಘನೆ, ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img