ಛತ್ತೀಸ್‌ಗಢದಲ್ಲಿ ಜನವರಿಯಿಂದ ಇಲ್ಲಿಯವರೆಗೆ 194 ನಕ್ಸಲರನ್ನು ಕೊಲ್ಲಲಾಗಿದೆ: ಅಮಿತ್ ಶಾ!

0
Spread the love

ದೆಹಲಿ:- ಛತ್ತೀಸ್‌ಗಢದಲ್ಲಿ ಜನವರಿಯಿಂದ 194 ನಕ್ಸಲರನ್ನು ಕೊಲ್ಲಲಾಗಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ.

Advertisement

ಈ ಬಗ್ಗೆ ಮಾತನಾಡಿದ ಅವರು, ಜನವರಿಯಿಂದ ಛತ್ತೀಸ್‌ಗಢದಲ್ಲಿ 194 ನಕ್ಸಲರ ಹತ್ಯೆ ಮಾಡಲಾಗಿದೆ. 801 ಮಂದಿಯನ್ನು ಬಂಧಿಸಲಾಗಿದೆ ಮತ್ತು 742 ಮಂದಿ ಶರಣಾಗಿದ್ದಾರೆ ಎಂದರು.

ನಾನು ಛತ್ತೀಸ್‌ಗಢದ ಮುಖ್ಯಮಂತ್ರಿ, ಗೃಹ ಸಚಿವರು, ಡಿಜಿಪಿ ಮತ್ತು ಇಡೀ ತಂಡವನ್ನು ಅಭಿನಂದಿಸುತ್ತೇನೆ. ಜನವರಿಯಿಂದ ಇಲ್ಲಿಯವರೆಗೆ 194 ನಕ್ಸಲರನ್ನು ಕೊಲ್ಲಲಾಗಿದೆ, 801 ನಕ್ಸಲೀಯರನ್ನು ಬಂಧಿಸಲಾಗಿದೆ ಮತ್ತು 742 ನಕ್ಸಲರು ಶರಣಾಗಿದ್ದಾರೆ” ಎಂದು ಶಾ ಹೇಳಿದ್ದಾರೆ.

ನಕ್ಸಲಿಸಂನೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಯುವಕರು ಶಸ್ತ್ರಾಸ್ತ್ರಗಳನ್ನು ತೊರೆದು ಮುಖ್ಯವಾಹಿನಿಗೆ ಬರುವಂತೆ ನಾನು ಮನವಿ ಮಾಡುತ್ತೇನೆ. ಅದು ಈಶಾನ್ಯ ರಾಜ್ಯ ಅಥವಾ ಜಮ್ಮು ಕಾಶ್ಮೀರವೇ ಆಗಿರಲಿ, ಸುಮಾರು 13000 ಜನರು ಆಯುಧವನ್ನು ತೊರೆದು ಮುಖ್ಯವಾಹಿನಿಗೆ ಸೇರಿದ್ದಾರೆ ಎಂದು ಅವರು ಹೇಳಿದರು


Spread the love

LEAVE A REPLY

Please enter your comment!
Please enter your name here