HomeGadag Newsಎಸ್‌ಎಸ್‌ಕೆ ಸಮಾಜ ಶಿಸ್ತಿನ ಸಮಾಜ : ಕೆ.ಎಸ್. ಈಶ್ವರಪ್ಪ

ಎಸ್‌ಎಸ್‌ಕೆ ಸಮಾಜ ಶಿಸ್ತಿನ ಸಮಾಜ : ಕೆ.ಎಸ್. ಈಶ್ವರಪ್ಪ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಸಂಸ್ಕೃತಿಗೆ ಉನ್ನತ ಸ್ಥಾನಮಾನವಿದೆ. ಹಿಂದೂ ಧರ್ಮವನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರಬಾರ ವೇದಿಕೆಯಲ್ಲಿ ಜರುಗಿದ `ನಮ್ಮೂರು ದಸರಾ-2024′ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಎಸ್‌ಎಸ್‌ಕೆ ಸಮಾಜದಲ್ಲಿ ವರದಕ್ಷಿಣೆ ರಹಿತ ಮದುವೆಗಳು ನಡೆಯುತ್ತಿರುವದು ಕೇಳಿ ತುಂಬಾ ಸಂತೋಷವಾಯಿತು. ಇದೇ ರೀತಿ ಇತರೆ ಸಮಾಜದವರು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ದಸರಾ ಹಬ್ಬದ ಸಂದರ್ಭದಲ್ಲಿ ಪ್ರತಿನಿತ್ಯ ಎಸ್.ಎಸ್.ಕೆ ಸಮಾಜದ ಮಹಿಳೆಯರು ಬೆಳಿಗ್ಗೆ ಎದ್ದು ದೇವಸ್ಥಾನಕ್ಕೆ ಆಗಮಿಸಿ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಧನ್ಯರಾಗುತ್ತಿದ್ದಾರೆ. ಎಸ್.ಎಸ್.ಕೆ ಸಮಾಜ ಬಾಂಧವರ ಶಿಸ್ತು, ಆಚರಣೆ, ಭಕ್ತಿ ವಿಶಿಷ್ಟವಾಗಿದೆ. ಮುಂದಿನ ದಸರಾ ಹಬ್ಬದಲ್ಲಿ ಕುಟುಂಬ ಸಮೇತವಾಗಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತೇನೆ ಎಂದು ಹೇಳಿದರು. ಇದಕ್ಕೂ ಮುಂಚೆ ಅವರು ಜಗದಂಬಾ ದೇವಿ ಹಾಗೂ ತುಳಜಾಭವಾನಿ ದೇವಿಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಪಂಚ ಕಮಿಟಿಯ ಸದಸ್ಯರಾದ ಎನ್.ಆರ್. ಖಟವಟೆ, ವಿಶ್ವನಾಥಸಾ ಖಟವಟೆ, ಸುರೇಶಕುಮಾರ ಬದಿ, ಮಾರುತಿ ಪವಾರ, ಬಲರಾಮ ಬಸವಾ, ಶ್ರೀನಿವಾಸ ಬಾಂಡಗೆ, ಮೋತಿಲಾಲಸಾ ಪೂಜಾರಿ, ಪರಶುರಾಮಸಾ ಬದಿ, ಅನಿಲ್ ಖಟವಟೆ, ಗಣಪತಸಾ ಜಿತೂರಿ, ವಿನೋದ ಬಾಂಡಗೆ, ಪ್ರಕಾಶ ಬಾಕಳೆ, ಅಂಬಾಸಾ ಖಟವಟೆ, ವಿಶ್ವನಾಥ ಸೂಳಂಕಿ, ಸಾಗರ ಪವಾರ, ಸತೀಶ ದೇವಳೆ, ಶ್ರೀಕಾಂತ ಬಾಕಳೆ, ಮೋಹನಸಾ ಪವಾರ, ನಾಗರಾಜ ಖೋಡೆ, ಉಮಾಬಾಯಿ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ ಮುಂತಾದವರು ಉಪಸ್ಥಿತರಿದ್ದರು. ಜಿ.ಎನ್. ಹಬೀಬ ನಿರೂಪಿಸಿದರು. ರೇಖಾ ಖಟವಟೆ ವಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಎಸ್.ಎಸ್.ಕೆ ಸಮಾಜ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಬಾಂಡಗೆ ಅವರು ವಹಿಸಿದ್ದರು. ವೇದಿಕೆ ಮೇಲೆ ಎಸ್.ಎಸ್.ಕೆ.ಸಮಾಜದ ಹಿರಿಯರು ಹಾಗೂ ಗಣ್ಯ ವ್ಯಾಪಾರಸ್ಥರಾದ ಬಾಬಾಸಾ ಬಾಕಳೆ, ಉದ್ಯಮಿ ಚಿದಾನಂದ ಕ್ಷತ್ರಿಯ, ಪಂಚ ಕಮಿಟಿಯ ಉಪಾಧ್ಯಕ್ಷ ರಾಜು ಬದಿ, ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ, ಕಾರ್ಯದರ್ಶಿ ರವಿ ಶಿದ್ಲಿಂಗ, ದಸರಾ ಕಮಿಟಿಯ ಚೇರಮನ್‌ವಿಷ್ಣುಸಾ ಶಿದ್ಲಿಂಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img