ತೋಂ. ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೆ

0
Thom. Commemoration of Siddhalinga Sri
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಬಸವ ಕೇಂದ್ರ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಸಂಯುಕ್ತ ಆಶ್ರಯದಲ್ಲಿ ಲಿಂಗೈಕ್ಯ ಪೂಜ್ಯ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ 6ನೇ ಪುಣ್ಯಸ್ಮರಣೋತ್ಸವ ಹಾಗೂ ಸಾಹಿತಿಗಳಾದ ಎ.ಆರ್. ಪಂಪಣ್ಣ ಇವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ಚಟ್ಟಿ ವಹಿಸಿದ್ದರು. ಉಪನ್ಯಾಸವನ್ನು ನೀಡಿದ ಬಸವ ಕೇಂದ್ರದ ಸಂಚಾಲಕ ಕಿರಣ ತಿಪ್ಪಣ್ಣವರ ಪೂಜ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಜೀವನ ದರ್ಶನವನ್ನು ತಿಳಿಸಿದರು. ಪ್ರಸಾದ ಸೇವೆಯನ್ನು ಬಸವ ಕೇಂದ್ರದ ಶರಣರಾದ ಮಂಜುನಾಥ ಅಡಿವಪ್ಪ ಮಲ್ಲಾಪುರ್ ವಹಿಸಿಕೊಂಡಿದ್ದರು. ಸುರೇಶ್ ನಿಲುಗಲ್ಲ ಸ್ವಾಗತಿಸಿದರು. ಶರಣೆ ಮಂಜುಳಾ ಹಾಸಿಲ್ಕರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಶರಣು ಸಮರ್ಪಣೆಯನ್ನು ದೀಪಾ ನಿಲುಗಲ್ ನಡೆಸಿಕೊಟ್ಟರು.

ವಚನ ಸಂಗೀತವನ್ನು ಕುಮಾರಸ್ವಾಮಿ ಹಿರೇಮಠ ಹಾಗೂ ಎಚ್.ಬಿ. ತೋಟದ ನಡೆಸಿಕೊಟ್ಟರು.

ಹಗರಿಬೊಮ್ಮನಹಳ್ಳಿ ತಾಲೂಕಿನ ಹಿರಿಯರು, ಬಸವ ಕೇಂದ್ರ ಜಾಗತಿಕ ಲಿಂಗಾಯತ ಮಹಾಸಭೆಯ ಸರ್ವ ಸದಸ್ಯರು, ಒಕ್ಕಲಿಗೇರಿಯ ಓಣಿಯ ಗುರು-ಹಿರಿಯರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here