ಪ್ರಧಾನಿ ಮೋದಿಯನ್ನು ಬದಲಾವಣೆ ಮಾಡಬೇಕು ಹುನ್ನಾರ ಮಾಡಲಾಗುತ್ತಿದೆ: ಸಂತೋಷ್ ಲಾಡ್

0
Spread the love

ಬೀದರ್:‌ ಪ್ರಧಾನಿ ಮೋದಿಯನ್ನು ಬದಲಾವಣೆ ಮಾಡಬೇಕು ಎಂಬ ಹುನ್ನಾರ ಮಾಡಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, . ಪ್ರಧಾನಿ ಮೋದಿ ಆರ್‌ಎಸ್‌ಎಸ್‌ನವರ ಮಾತು ಕೇಳುತ್ತಿಲ್ಲ ಎಂದು ಅಸಮಾಧಾನ ಇದೆ. ಕೇಂದ್ರದಲ್ಲೂ 30-40 ಸೀಟು ಮಾತ್ರ ವ್ಯತ್ಯಾಸ ಇವೆ.

Advertisement

ಕೇಂದ್ರ ಸರ್ಕಾರ ಬೀಳುತ್ತದೆ ಎಂಬ ಸಂದೇಹ ನನಗಿದೆ. ಮೋದಿ ಬೀಳಿಸಲಿಕ್ಕೆ ಆರ್‌ಎಸ್‌ಎಸ್‌ನವರಿಗೆ ಪವರ್ ಇಲ್ವಾ? ಎಂದು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ 5 ವರ್ಷ ಅಧಿಕಾರ ನಡೆಸುತ್ತದೆ. ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ತಿಳಿಸಿದರು.

ಇನ್ನೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟು ಹಂಚಿಕೆಯನ್ನು ಹಗರಣ, ಹಗರಣ ಎನ್ನುವುದಕ್ಕೆ ನಿಮ್ಮ ಬಳಿ ಏನಾದರೂ ದಾಖಲೆ ಇದೆಯಾ.? ಅದಕ್ಕೆ ಏನಾದ್ರೂ ದಾಖಲಾತಿ ಇದೆಯಾ, ಇದ್ದರೆ ಪ್ರೊಡ್ಯೂಸ್ ಮಾಡಿ. ದೇಶದಲ್ಲಿ ಬೇರೆ ಹಗರಣಗಳೇ ನಡೆದಿಲ್ಲವಾ? ರಫೇಲ್ ಡೀಲ್, ಎಲೆಕ್ಟ್ರಾಲ್ ಬಾಂಡ್, ಗುಜರಾತ್ ರೇಪ್ ಕೇಸ್ ಸೇರಿ ಹಲವು ಪ್ರಕರಣಗಳಾಗಿವೆ. ಅವುಗಳ ಬಗ್ಗೆ ಮಾತನಾಡುವುದೇ ಬೇಡ್ವಾ? ಎಲ್ಲ ವಿಚಾರಗಳನ್ನು ಮಾಧ್ಯಮದವರು ಪ್ರಶ್ನೆ ಮಾಡಬೇಕು ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here