HomeGadag Newsಧರ್ಮದ ಹಾದಿಯಲ್ಲಿ ಮುನ್ನಡೆಯಿರಿ : ಶಿವಾಚಾರ್ಯ ಸ್ವಾಮಿಗಳು

ಧರ್ಮದ ಹಾದಿಯಲ್ಲಿ ಮುನ್ನಡೆಯಿರಿ : ಶಿವಾಚಾರ್ಯ ಸ್ವಾಮಿಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಎಲ್ಲರೂ ಧರ್ಮವಂತರಾಗಿ, ಧರ್ಮದ ಹಾದಿಯಲ್ಲಿ ಮುನ್ನಡೆಯಿರಿ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಿ ಎಂದು ನರಗುಂದದ ಸಿದ್ದೇಶ್ವರ ಪಂಚಗ್ರಹಗುಡ್ಡ ಹಿರೇಮಠದ ಪೂಜ್ಯ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ಗದುಗಿನ ಅಡವೀಂದ್ರ ಸ್ವಾಮಿ ಮಠದಲ್ಲಿ ಜರುಗಿದ ದಸರಾ ಮಹೋತ್ಸವದ ಶ್ರೀದೇವಿ ಪುರಾಣ, ಅನ್ನಪೂರ್ಣೆಶ್ವರಿದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪುರಾಣ ಪ್ರವಚನಗಳನ್ನು ಕೇಳುವುದರಿಂದ ಮನಸ್ಸು ಪ್ರಸನ್ನಗೊಳ್ಳುವದು, ಸದ್ಗುಣಗಳು ಮೂಡುವವು ಎಂದರಲ್ಲದೆ ನಾವಿಂದು ವೈಚಾರಿಕ ಚಿಂತನೆಗಳನ್ನು ಮಾಡಬೇಕು. ಪರಿಸರ ಸಂರಕ್ಷಣೆ, ನೀರಿನ ಮಿತ ಬಳಕೆ ಮಾಡಬೇಕು. ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ, ಜಲ, ಸೌರ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಸಾಧಕ ಮಹನೀಯರನ್ನು ಸನ್ಮಾನಿಸುವದು ಯುವ ಪೀಳಿಗೆಗೆ ಸ್ಪೂರ್ತಿ-ಮಾದರಿ ಆಗಲೆಂದು. ಜೊತೆಗೆ ಸಾಧಕರಿಗೆ ಪ್ರೋತ್ಸಾಹ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ. ಯುವಕರು ಹಿರಿಯರನ್ನು ಅನುಸರಿಸಬೇಕು, ಸಾಧಕರನ್ನು ನೋಡಿ ತಾವೂ ಆ ರೀತಿಯ ಸಾಧನೆ ಮಾಡಿ ಜೀವನದಲ್ಲಿ ಮುಂದೆ ಬರುವದನ್ನು ಕಲಿಯಬೇಕೆಂದರು.

ಸಮಾರಂಭದಲ್ಲಿ ಸಹಕಾರ ಇಲಾಖೆಯ ವಿಶ್ರಾಂತ ಸಹಾಯಕ ನಿಬಂಧಕ ಬಿ.ಎಂ. ಬಿಳೇಯಲಿ ಅವರಿಗೆ ‘ಸಮಾಜ ಸೇವಾ ರತ್ನ’ ಗದುಗಿನ ಶಿವಾನಂದ ಯೋಗ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಸ್. ಹಿರೇಮಠ ಅವರಿಗೆ ‘ಯೋಗ ಸಾಧನಾ ರತ್ನ’, ರೋಣದ ಗಣ್ಯ ಉದ್ಯಮಿ ಶಿವಣ್ಣ ಪಲ್ಲೇದ ಅವರಿಗೆ ‘ಶ್ರೇಷ್ಠ ಉದ್ಯಮಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಮ್ಮುಖವನ್ನು ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ವಹಿಸಿದ್ದರು. ವೇದಿಕೆಯ ಮೇಲೆ ಜಾತ್ರಾ ಸಮಿತಿಯ ಅಧ್ಯಕ್ಷ ಬಸವರಾಜ ಪಲ್ಲೇದ, ಮಹಿಳಾ ಸಮಿತಿಯ ಅಧ್ಯಕ್ಷೆ ಲೀಲಾವತಿ ಬಿಳೇಯಲಿ ಉಪಸ್ಥಿತರಿದ್ದರು. ಡಾ. ರಾಜಗುರು ಗುರುಸ್ವಾಮಿ ಕಲಕೇರಿ, ಚನ್ನಬಸಯ್ಯ ಹೇಮಗಿರಿಮಠ ಅವರಿಂದ ಪುರಾಣ ಪ್ರವಚನ ಜರುಗಿತು.

ಜೆ.ವ್ಹಿ. ಹಿರೇಮಠ ಸ್ವಾಗತಿಸಿದರು. ಮಂಗಲಾ ಯಾನಮಶೆಟ್ಟಿ, ಸುವರ್ಣಾ ಮದರಿಮಠ ನಿರೂಪಿಸಿದರು. ಎಸ್.ಎಂ. ಕಾತರಕಿ ವಂದಿಸಿದರು.

ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಪುರಾಣ ಸನ್ನಿವೇಶವನ್ನು ವಿವರಿಸುತ್ತ, ಅಪಾರ ಶಕ್ತಿಯುಳ್ಳ ಮಹಿಷಾಸುರ ಯಾರಿಂದಲೂ ಹತನಾಗದಿರುವ ವರ ಬ್ರಹ್ಮ ದೇವನಿಂದ ಪಡೆದಿದ್ದರೂ ತನ್ನ ಅಪರಿಮಿತ ಪರಾಕ್ರಮ ಶಕ್ತಿಯನ್ನು ಶುಂಭ-ನಿಶುಂಭರ ಜೊತೆಗೂಡಿ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡದ್ದರಿಂದ ಶ್ರೀದೇವಿ ಜೊತೆ ಯುದ್ಧ ಮಾಡಿ ಪರಾಜಿತಗೊಂಡ ಸನ್ನಿವೇಶಗಳನ್ನು ವಿವರಿಸಿ, ನಾವು ನಮ್ಮಲ್ಲಿರುವ ಶಕ್ತಿಯನ್ನು ಸಮಾಜದ ಸದುದ್ದೇಶಕ್ಕೆ ಸದ್ಭಳಕೆ ಮಾಡಿದರೆ ನಮ್ಮ ಸ್ವತ್ತು, ಆರೋಗ್ಯ ವೃದಿಯಾಗುತ್ತೆ ಹಾಗೂ ಮಾನಸಿಕ ನೆಮ್ಮದಿ ಪಡೆಯಬಹುದು ಎಂದರು.

ಇಂದಿನ ಕಾರ್ಯಕ್ರಮ

ಅ. 10ರ ಸಂಜೆ 6.30 ಗಂಟೆಗೆ ದುರ್ಗಾಷ್ಟಮಿ ಕಾರ್ಯಕ್ರಮ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ವಿಜಯನಗರದ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ.ಎಂ. ಮೈತ್ರಿ ಹಾಗೂ ಉಪನ್ಯಾಸಕಿ ಡಾ.ದ್ರಾಕ್ಷಾಯಣಿ ಮೈತ್ರಿ, ಅಖಿಲ ಭಾರತ ಸೇವಾ ಸಮಿತಿ ಗದಗ ಅಧ್ಯಕ್ಷ ಪ್ರಭಯ್ಯ ದಂಡಾವತಿಮಠ, ಪ್ರೀತಿ ದಂಡಾವತಿಮಠ ಆಗಮಿಸುವರು.

ಭಕ್ತಿಸೇವೆಯನ್ನು ಎ.ಎಂ. ವಿರಕ್ತಮಠ, ರಾಕೇಶ ದಾಸರಿ, ಎಸ್.ಎಸ್. ಸಜ್ಜನರ, ಶೋಭಾ ದಶವಂತ, ರೇಖಾ ಜೀರಾಳ, ಪಿ.ಟಿ. ನಾರಾಯಣಪೂರ, ಸಿದ್ಧಲಿಂಗಪ್ಪ ಕೋಟಿ, ಅತೀಶ್ ಖಂಡಪ್ಪಗೌಡ್ರ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!