ನಿವೃತ್ತ ಸೈನಿಕ ಜಗದೀಶ ಲಿಂಬಿಕಾಯಿಗೆ ಅದ್ದೂರಿ ಸ್ವಾಗತ

0
A grand welcome for retired soldiers
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ಗ್ರಾಮಕ್ಕೆ ಆಗಮಿಸಿದ ಸೈನಿಕ ಜಗದೀಶ ಲಿಂಬಿಕಾಯಿ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಇಲ್ಲಿಯ ಬಸ್ ನಿಲ್ದಾಣದಲ್ಲಿ ಮಹಿಳೆಯರು ಸಿಂಧೂರ ತಿಲಕವನ್ನಿಟ್ಟು ಆರತಿ ಬೆಳಗಿದರು.

Advertisement

ಮಾಜಿ ಮತ್ತು ಹಾಲಿ ಸೈನಿಕರ ಸಂಘದ ಸದಸ್ಯರು ಹೂ ಮಾಲೆ ಹಾಕಿ ಘೋಷಣೆಗಳನ್ನು ಕೂಗಿದರು. ನಂತರ ಬಸ್ ನಿಲ್ದಾಣದಿಂದ ಮಾರುತಿ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ದೇವಸ್ಥಾನದ ಆವರಣದಲ್ಲಿ ಸೈನಿಕರ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು. ಗ್ರಾಮ ಪಂಚಾಯತ ಅಧ್ಯಕ್ಷ ಕೆ.ಎಸ್. ಪೂಜಾರ, ಮಾಜಿ ಸೈನಿಕರಾದ ದತ್ತಾತ್ರೇಯ ಜೋಶಿ, ಪರಸಪ್ಪ ಗುಂಡಳ್ಳಿ, ಬಸವರಾಜ ಕುಕನೂರು, ಶರಣಯ್ಯ ಗಂಧದ, ಶಿವಪ್ಪ ಬಾಳಿತೋಟ, ಹನುಮಂತಪ್ಪ ಭಜಂತ್ರಿ, ಅಂದಾನಯ್ಯ ನರಗುಂದಮಠ, ಗಂಗಾಧರ ಹಾಲಿನವರ, ಹಾಲಿ ಸೈನಿಕ ಕಳಕಪ್ಪ ಕುಂಬಾರ, ಬಸವರಾಜ ಮುಳ್ಳಾಳ, ಮರಿಯಪ್ಪ ವಡ್ಡರ ಸೇರಿದಂತೆ ಸೈನಿಕರ ಅಭಿಮಾನಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here