ಆನ್ಲೈನ್ ಫುಡ್ ಪ್ರಿಯರೇ ಇಲ್ಲಿ ಕೇಳಿ: ಕ್ಲೌಡ್ ಕಿಚನ್ ನಲ್ಲಿ ಸಿದ್ಧವಾಗುವ ಆಹಾರ ಎಷ್ಟು ಸುರಕ್ಷಿತ?

0
Spread the love

ಬೆಂಗಳೂರು:- ಆನ್​​ಲೈನ್ ಮೂಲಕ ಜನರ ಮನೆ ಮನೆ ತಲುಪುತ್ತಿರುವ ಆಹಾರ ಎಷ್ಟು ಸುರಕ್ಷಿತ ಎಂಬ ಚರ್ಚೆ ಇದೀಗ ಶುರುವಾಗಿದೆ. ಆನ್​ಲೈನ್ ಮೂಲಕ ಆಹಾರ ಪೂರೈಸುವ ಕ್ಲೌಡ್ ಕಿಚನ್​ಗಳಿಗೆ ಮಾರ್ಗಸೂಚಿಗಳನ್ನ ನೀಡುವಂತೆ ಆಹಾರ ಇಲಾಖೆಗೆ ಒತ್ತಾಯ ಕೇಳಿ ಬರುತ್ತಿದೆ.

Advertisement

ಇತ್ತಿಚ್ಚಿಗೆ ಎಫ್‌ಎಸ್‌ಎಸ್‌ಎಐ ಪರವಾನಗಿ ಇದ್ದರೆ ಯಾರೂ ಬೇಕಾದರೂ ಈ ಕ್ಲೌಡ್ ಕಿಚನ್ ಶುರು ಮಾಡಬಹುದಾಗಿದೆ. ಎಲ್ಲಿ ಬೇಕೋ ಅಲ್ಲಿ ಈ ಕ್ಲೌಡ್ ಕಿಚನ್​​ಗಳನ್ನ ಶುರು ಮಾಡಬಹುದಾಗಿದೆ. ಇದಕ್ಕೆ ಆಹಾರ ಇಲಾಖೆ ಪರವನಾಗಿಯನ್ನ ಕೂಡಾ ನೀಡುತ್ತಿದೆ. ಬಹುತೇಕ ಕ್ಲೌಡ್ ಕಿಚನ್​ಗಳ ಬಗ್ಗೆ ಯಾವುದೇ ಮಾಹಿತಿ ಗ್ರಾಹಕರಿಗೆ ಇರುವುದಿಲ್ಲ.

ಅವುಗಳ ಆಹಾರ ತಯಾರಿಕೆ ಹೈಜೀನ್ ಬಗ್ಗೆ ಗ್ರಾಹಕರಿಗೆ ಮಾಹಿತಿಯೇ ಇಲ್ಲದಾಗಿದೆ. ಯಾಕಂದರೆ ಎಲ್ಲಿ ಬೇಕೋ ಅಲ್ಲಿ ಈ ಕ್ಲೌಡ್ ಕಿಚನ್ ತೆರೆಯಲು ಸುಲಭವಾಗಿ ಅವಕಾಶ ಸಿಗುತ್ತಿದೆ. ಇದರಿಂದ ಆಹಾರದ ಗುಣಮಟ್ಟದ ಬಗ್ಗೆ ಚರ್ಚೆ ಶುರುವಾಗಿದೆ.

ಹೀಗಾಗಿ ಆನ್ಲೈನ್ ಆ್ಯಪ್​​ಗಳಲ್ಲಿ ಆಹಾರ ಆಡರ್ ಮಾಡುವಾಗ ಇದು ಎಲ್ಲಿಂದ ಬರ್ತಿದೆ? ಹೋಟೆಲ್ ಅಥವಾ ಕ್ಲೌಡ್ ಕಿಚನ್ ಅಥವಾ ಬೇಕರಿ ಹೀಗೆ ವಿಭಾಗಿಸಿ ಗ್ರಾಹಕರಿಗೆ ನೀಡುವಂತೆ ಹಾಗೂ ಇದರ ಗುಣಮಟ್ಟದ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿಯೇ ಆಹಾರ ನೀಡುವ ವಿಧಾನದ ಬಗ್ಗೆ ಒತ್ತಾಯ ಕೇಳಿ ಬರ್ತಿದೆ.

ಕ್ಲೌಡ್ ಕಿಚನ್​​ಗಳ ಸ್ವಚ್ಛತೆ ಹಾಗೂ ಗುಣಮಟ್ಟದ ಬಗ್ಗೆ ಆಹಾರ ಹಾಗೂ ಗಣಮಟ್ಟ ಇಲಾಖೆ ಪರಿಷ್ಕತವಾದ ಮಾರ್ಗಸೂಚಿಗಳನ್ನು ನೀಡುವಂತೆ ಒತ್ತಾಯ ಕೇಳಿಬಂದಿದೆ. ಆಹಾರ ತಜ್ಞರು ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಆಹಾರ ತಯಾರಿಸುವ ವಿಧಾನ, ತಯಾರಿ ಮಾಡುವವ ಆರೋಗ್ಯ, ಗಣಮಟ್ಟ ಹಾಗೂ ಶುಚಿತ್ವ ಎಲ್ಲವೂ ಮುಖ್ಯವಾಗುತ್ತದೆ. ಇಲ್ಲವಾದರೆ ಆರೋಗ್ಯಕ್ಕೆ ಅಪಾಯ ಖಂಡಿತ ಎಂದು ಆಹಾರ ತಜ್ಞ ಕೀರ್ತಿ ಹಿರಿಸಾವೆ ಅಭಿಪ್ರಾಯಪಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here