ತನ್ನ ಕಾಯಿಲೆ ಗುಣಪಡಿಸಲು ಮಾತ್ರಿಕನ ಮಾತು ನಂಬಿ ಈ ನೀಚ ತಾಯಿ ಮಾಡಿದ್ದೇನು ಗೊತ್ತಾ!?

0
Spread the love

ಉತ್ತರ ಪ್ರದೇಶ:- ನೀಚ ತಾಯಿ ಓರ್ವಳು ತನ್ನ ಕಾಯಿಲೆ ಗುಣಪಡಿಸಲು ಮಾತ್ರಿಕನ ಮಾತು ನಂಬಿ ನವಜಾತ ಶಿಶುವನ್ನೇ ಬಲಿಕೊಟ್ಟ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಜರುಗಿದೆ.

Advertisement

ಮಮತಾ ಎಂಬ ಮಹಿಳೆಯು ತನ್ನ ಗಂಡನ ಜೊತೆ ಸೇರಿ ಈ ನೀಚ ಕೃತ್ಯ ಎಸಗಿದ್ದಾಳೆ. ಮಮತಾ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ರೋಗವನ್ನು ಗುಣಪಡಿಸಲು ಮಗುವನ್ನು ಕೊಲ್ಲುವುದೊಂದೇ ದಾರಿ ಎನ್ನುವ ಮಾತ್ರಿಕನ ಮಾತು ಕೇಳಿ ದಂಪತಿ ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಭೋಪಾ ಪ್ರದೇಶದ ಬೆಲ್ಡಾ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಮಗು ಕಾಣೆಯಾಗಿರುವುದನ್ನು ಕಂಡು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಬನ್ಸಾಲ್ ಪಿಟಿಐಗೆ ತಿಳಿಸಿದ್ದಾರೆ.

ವಿಚಾರಣೆ ವೇಳೆ ಮಮತಾ ಮತ್ತು ಆಕೆಯ ಪತಿ ಗೋಪಾಲ್ ಕಶ್ಯಪ್ ಅವರು ತಮ್ಮ ಮಗಳನ್ನು ಕೊಂದು ಆಕೆಯ ಶವವನ್ನು ಕಾಡಿನಲ್ಲಿ ಎಲ್ಲೋ ಬಚ್ಚಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಬನ್ಸಾಲ್ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here