ಬೆಂಗಳೂರು: ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಮಯ ಹತ್ತಿರ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಮಾತನಾಡಿದ ಅವರು, ಈ ಸರ್ಕಾರ ದೇಶದ್ರೋಹಿಗಳ ವಿರುದ್ಧದ ಕೇಸ್ ವಾಪಸ್ ಪಡೆದಿದೆ. ಇವರು ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿ,
ಮುಡಾ ಸೈಟ್ ಲೂಟಿ ಮಾಡಿ, ಎಸ್‍ಸಿಎಸ್‍ಪಿ, ಟಿಎಸ್‍ಪಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಅವರ ಶಾಸಕ ರಾಜು ಕಾಗೆಯವರೇ ಇಂಥ ಸರ್ಕಾರದಲ್ಲಿ ಶಾಸಕ ಆಗಿರೋದಕ್ಕಿಂತ ಆತ್ಮಹತ್ಯೆ ಲೇಸು ಎಂದಿದ್ದಾರೆ. ಅವರ ಶಾಸಕರೇ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಮಯ ಹತ್ತಿರ ಆಗುತ್ತಿದೆ ಎಂದಿದ್ದಾರೆ. ಇನ್ನೆಷ್ಟು ವರ್ಷ ಓಲೈಕೆ ರಾಜಕೀಯ ಮಾಡ್ತೀರಿ? ನಿಮ್ಮ ಯೋಗ್ಯತೆ ಹರಿಯಾಣ ಚುನಾವಣೆಯಲ್ಲಿ ಗೊತ್ತಾಗಿದೆ. ಜಮ್ಮು ಕಾಶ್ಮೀರ ಫಲಿತಾಂಶ ನೋಡಿಯೂ ಇವರಿಗೆ ಬುದ್ಧಿ ಬಂದಿಲ್ಲ. ಇದು ಹಿಂದೂ ವಿರೋಧಿ ಸರ್ಕಾರ ಎಂದು ಕಿಡಿಕಾರಿದ್ದಾರೆ.