ವಿಜಯಸಾಕ್ಷಿ ಸುದ್ದಿ, ಗದಗ : ಆನ್‌ಲೈನ್ ಬೆಟ್ಟಿಂಗ್ ಮತ್ತು ಆನ್‌ಲೈನ್ ಬೆಟ್ಟಿಂಗ್ ಗೇಮ್‌ಗಳಿಂದ ಆಗುತ್ತಿರುವ ಅನಾಹುತಗಳನ್ನು ತಡೆಯುವ ಹಾಗೂ ಆನ್‌ಲೈನ್ ಬೆಟ್ಟಿಂಗ್ ಗೇಮ್ ವೆಬ್‌ಸೈಟ್‌ಗಳನ್ನು ನಿಷೇಧಿಸುವಂತೆ ನಮ್ಮ ಕರ್ನಾಟಕ ಸೇನೆ ಗದಗ ಜಿಲ್ಲಾಧ್ಯಕ್ಷ ಭೀಮಣ್ಣ ಯ.ಇಂಗಳೆ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭೀಮಣ್ಣ ಇಂಗಳೆ ಮಾತನಾಡಿ, ಹಲವು ವಿದ್ಯಾರ್ಥಿಗಳು, ಯುವಕರು ಆನಲೈನ್ ಬೆಟ್ಟಿಂಗ್ ಮತ್ತು ಆನ್‌ಲೈನ್ ಗೇಮ್‌ಗಳನ್ನು ಚಟವಾಗಿಸಿಕೊಂಡಿದ್ದಾರೆ. ಹಲವಾರು ಕುಟುಂಬಗಳು ಬೀದಿಗೆ ಬಂದಿವೆ.
ಇದರಿಂದ ಹಲವು ಆತ್ಮಹತ್ಯೆಯ ಘಟನೆಗಳೂ ನಡೆದಿವೆ. ಜನರನ್ನು ವಂಚಿಸುತ್ತಿರುವ ಆನ್‌ಲೈನ್ ಗೇಮಿಂಗ್ ವೆಬಸೈಟ್ ಹಾಗೂ ಅ್ಯಪ್‌ಗಳನ್ನು ನಿಷೇಧಿಸುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಶಾಮೀದ ಮಾಲ್ದಾರ, ಕಳಕಪ್ಪ ಜಿಲಜಿರಿ, ವೀರೇಶ ಶಿವಶಿಂಪಿಗೇರ, ಈರಣ್ಣ ಮ್ಯಾಗೇರಿ, ಪ್ರಕಾಶ ಇಂಗಳೆ, ಯಶವಂತ ಸಾಬಳೆ, ಹನಮಂತ ರೋಣ, ರವಿ ಚಿಂತಾಲ, ಕಳಕಪ್ಪ ಮೋರೆ, ಭೀಮಣ್ಣ ಕಾಟೆ, ಮಹಾಂತೇಶ ಬೂದಿಹಾಳ, ಬಸವರಾಜ ಪೂಜಾರ, ತಾಜು ಮಾಳುತ್ತರ ಯಮನೂರ ಗೌಡ್ರ ಮುಂತಾದವರಿದ್ದರು.