ಹುಬ್ಬಳ್ಳಿ: ಕೆಲವೇ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುತ್ತಾರೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರುಮೈಸೂರು ನಗರಾಭಿವೃದ್ಧಿ ಇಲಾಖೆಯ ಅಧ್ಯಕ್ಷ ಮರಿಗೌಡ ರಾಜೀನಾಮೆ ಕೊಟ್ಟರು. ಇದರಿಂದ ಗೊತ್ತಾಗುತ್ತದೆ ಒಂದೊಂದು ಆಗಿ ಏನು ಆಗಿದೆ ಅಲ್ಲಿ ಭ್ರಷ್ಟಾಚಾರ ಕುರಿತು ಹಗರಣದ ಹೊರ ಬರುತ್ತೀವೆ ಎಂದರು. ಇದರ ಪರಿಣಾಮವಾಗಿ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರು ರಾಜೀನಾಮೆ ಕೊಡುತ್ತಾರೆ ಎಂದರು.
ಇನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಉಪ ಚುನಾವಣೆಗೆ ನಮ್ಮಲ್ಲಿ ಸಾಕಷ್ಟು ಆಕಾಂಕ್ಷೆ ಗಳು ಇದ್ದಾರೆ. ನಮ್ನ ಉಸ್ತುವಾರಿ ರಾಧಾಮೋಹನ್ ದಾಸ್ ಹಾಗೂ ಪಕ್ಷದ ಹಿರಿಯ ನಾಯಕರು ಏನು ಹೇಳುತ್ತಾರೆ ಯಾರನ್ನ ಪೈನಲ್ ಮಾಡುತ್ತಾರೆ ಅವರ ಪರವಾಗಿ ಚುನಾವಣೆ ಮಾಡುತ್ತೇವೆ ಶಿಗ್ಗಾಂವಿ ಉಪ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸೇರಿದಂತೆ ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದರು.