ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯಅತಿಥಿಗಳಾಗಿ ಆಗಮಿಸಿದ ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ ರಾಮಾಯಣವನ್ನು ಬರೆದು ಜಗತ್ತಿಗೆ ಮಾದರಿಯಾದರು. ಇಂತಹ ಮಹಾನ್ ವ್ಯಕ್ತಿಯ ಜಯಂತ್ಯುತ್ಸವವನ್ನು ಸರ್ವರೂ ಅತ್ಯಂತ ಹೆಮ್ಮೆಯಿಂದ ಆಚರಿಸುವಂತಾಗಲಿ ಎಂದರು.
ಪ್ರಮುಖರಾದ ಎಂ.ಎಸ್. ಕರೀಗೌಡ್ರ, ಈಶಪ್ಪ ನಾಯ್ಕರ, ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಈಶ್ವರಪ್ಪ ರಂಗಪ್ಪನವರ ಸಂದರ್ಭೊಚಿತವಾಗಿ ಶ್ರೀ ಮಹರ್ಷಿ ವಾಲ್ಮೀಕಿಯವರ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ವಕ್ತಾರರಾದ ಎಂ.ಎಂ. ಹಿರೇಮಠ, ಪ್ರಶಾಂತ ನಾಯ್ಕರ, ಅನಿಲ ಅಬ್ಬಿಗೇರಿ, ಜಗನ್ನಾಥಸಾ ಭಾಂಡಗೆ, ಅಶೋಕ ಸಂಕಣ್ಣವರ, ರಮೇಶ ಸಜ್ಜಗಾರ, ನಾಗರಾಜ ತಳವಾರ, ಶಂಕರ ಕಾಕಿ, ಕೆ.ಪಿ. ಕೋಟಿಗೌಡ್ರ, ಸಂತೋಷ ಅಕ್ಕಿ, ಮಾಂತೇಶ ಬಾತಾಖಾನಿ, ಎಸ್.ಪಿ. ಚವಡಿ, ರಂಗಪ್ಪ ಯರಗುಡಿ, ರೇಖಾ ಬಂಗಾರಶೆಟ್ರ, ಯೋಗೇಶ್ವರಿ ಭಾವಿಕಟ್ಟಿ, ಮಂಜುನಾಥ ಎಲಿಸುರ, ಜಗದೀಶ ತಳವಾರ, ಆನಂದ ಬೆಳದಡಿ, ಶರಣಪ್ಪ ತಳಕಲ, ರಾಮಣ್ಣ ರಣತೂರ, ಪಕ್ಕೀರಪ್ಪ ಮಾದಣ್ಣವರ, ಅರವಿಂದ ಅಣ್ಣಿಗೇರಿ, ವಿನೋದ ಹಂಸನೂರ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಸ್.ಟಿ.ಮೋರ್ಚಾ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಯ್.ಪಿ. ಅಡ್ನೂರ ನಿರೂಪಿಸಿದರು. ಯಲ್ಲಪ್ಪ ಶೀರಿ ವಂದಿಸಿದರು.