ಸುದೀಪ್‌ ತಾಯಿಯ ಅಂತಿಮ ದರ್ಶನ ಪಡೆದ ಬಿಗ್‌ ಬಾಸ್‌ ಸ್ಪರ್ಧಿಗಳು!

0
Spread the love

ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ನಿಧನರಾಗಿದ್ದು, ಅನೇಕ ಗಣ್ಯರು ಹಾಗೂ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಕನ್ನಡದ ಚಿತ್ರರಂಗದ ಅನೇಕ ಗಣ್ಯರು ಸುದೀಪ್​ ನಿವಾಸಕ್ಕೆ ತೆರಳಿ ಸರೋಜಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.

Advertisement

ಅದೇ ರೀತಿ ಸುದೀಪ್ ತಾಯಿಯ ನಿಧನ ಸುದ್ದಿ ತಿಳಿಯುತ್ತಿದ್ದಂತೆ ನಟನ ಮನೆಗೆ ತೆರಳಿ ‘ಬಿಗ್ ಬಾಸ್ ಕನ್ನಡ 10’ರ ವಿನ್ನರ್ ಕಾರ್ತಿಕ್ ಮಹೇಶ್, ವಿನಯ್ ಗೌಡ, ಸಿರಿ, ತುಕಾಲಿ ಸಂತೋಷ್ ಸರೋಜಾ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅದಷ್ಟೇ ಅಲ್ಲ, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಆರ್ಯವರ್ಧನ್ ಗುರೂಜಿ, ರಂಜಿತ್ ಕೂಡ ಆಗಮಿಸಿದ್ದಾರೆ. ಇನ್ನೂ ಸರೋಜ ಅವರ ಅಂತಿಮ ದರ್ಶನಕ್ಕೆ ಜೆಪಿ ನಗರದ ಸುದೀಪ್ ಅವರ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಈಗಾಗಲೇ ಸುದೀಪ್ ಅವರ ಅಭಿಮಾನಿಗಳು ಅವರ ನಿವಾಸದತ್ತ ತೆರಳುತ್ತಿದ್ದಾರೆ. ಸುದೀಪ್ ಅವರ ತಾಯಿ ಸರೋಜ ಅವರು ಮಂಗಳೂರು ಮೂಲದವರಾಗಿದ್ದು, ತುಳು ಅವರ ಮಾತೃಭಾಷೆಯಾಗಿತ್ತು. ತಾಯಿ ಮಗನ ಸಂಬಂಧ ಬಹಳ ಆತ್ಮೀಯತೆಯಿಂದ ಕೂಡಿತ್ತು. ಮಗ ಸುದೀಪ್ ಜೊತೆಗೇ ಜೆಪಿ ನಗರದ ನಿವಾಸದಲ್ಲಿ ಅವರು ವಾಸವಾಗಿದ್ದರು.

 


Spread the love

LEAVE A REPLY

Please enter your comment!
Please enter your name here