ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ಘಟಕದ ವತಿಯಿಂದ ಶನಿವಾರ 2024-2025ನೇ ಸಾಲಿನ ಎನ್.ಎಸ್.ಎಸ್. ಕಾರ್ಯಚುವಟಿಕೆಗಳ ಉಧ್ಘಾಟನಾ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ನಂದಿವೇರಿ ಸಂಸ್ಧಾನಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿ, ಎನ್.ಎಸ್.ಎಸ್. ವಿದ್ಯಾರ್ಥಿಗಳು ಭಾಗ್ಯವಂತರು, ವಿಷೇಶ ನಾಯಕತ್ವ ಶಿಬಿರ, ವ್ಯಕ್ತಿತ್ವ ವಿಕಸನ ಶಿಬಿರಗಳೊಂದಿಗೆ ಎನ್.ಎಸ್.ಎಸ್. ಸಮಾಜದಲ್ಲಿ ಬದುಕುವುದನ್ನು ಕಲಿಸುತ್ತದೆ. ಸಮಯ ಪಾಲನೆ, ಶಿಸ್ತು, ಗುರು-ಹಿರಿಯರಿಗೆ ಗೌರವ ಕೊಡುವುದನ್ನು ಎನ್.ಎಸ್.ಎಸ್. ಕಲಿಸುತ್ತದೆ. ನೀನು ಸಾಮಾನ್ಯನಾಗಿರು, ಆದರೆ ಜಾಗತಿಕವಾಗಿ ವಿಚಾರವನ್ನು ಮಾಡು ಮತ್ತು ಸಮಾಜಕ್ಕೆ ಸೇವೆ ಮಾಡು ಎಂದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಜೆ.ಟಿ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್.ಬಿ. ಹಾವೇರಿ ಮಾಅತನಾಡಿ, ಎನ್.ಎಸ್.ಎಸ್. ಒಂದು ಒಳ್ಳೆಯ ಸಂಘಟನೆ ಹಾಗೂ ಇದು `ನನಗಲ್ಲ ನಿನಗೆ’ ಎಂಬ ಸಚಿದೇಶ ಸಾರುತ್ತದೆ ಎಂದು ತಿಳಿಸಿದರು.
ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಧರು ಹಾಗೂ ಎನ್.ಎಸ್.ಎಸ್. ಘಟಕದ ನಿಕಟಪೂರ್ವ ಕಾರ್ಯಕ್ರಮಾಧಿಕಾರಿಗಳಾದ ಡಾ. ವಿಠ್ಠಲ್ ಕೊಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ. ವಾಗೀಶ ಗು.ರೇಶ್ಮಿ, ಸಹ ಕಾರ್ಯಕ್ರಮಾಧಿಕಾರಿ ಪ್ರೊ. ವೀರಣ್ಣ ಬಡಿಗೇರ, ಎನ್.ಎಸ್.ಎಸ್. ಘಟಕದ ನಾಯಕರಾದ ಪವನ ಕುಲಕರ್ಣಿ, ನಾಯಕಿಯರಾದ ಸಾಕ್ಷೀ ಹೂಸಮಠ, ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಸ್ವಯಂಸೇವಕರು ಪಾಲ್ಗೊಂಡಿದ್ದರು. ಪವಿತ್ರಾ ಭಜಂತ್ರಿ ಸ್ವಾಗತಿಸಿದರು. ಸಹನಾ ನಾಲವಾಡ ಹಾಗೂ ಆನಂದ ಮಾದರ ನಿರೂಪಿಸಿದರು.