ಪಂ. ಪುಟ್ಟರಾಜರ ಜನ್ಮದಿನವನ್ನು ಸರಕಾರವೇ ಆಚರಿಸಲಿ :ಚನ್ನವೀರಶ್ರೀ

0
Pt. Puttaraja Sahityotsava-2024' programme
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರು ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ ವಿವಿಧ ಪ್ರಕಾರದ ಸಾಹಿತ್ಯ ರಚಿಸಿದ್ದು, ಸರಕಾರವೇ ಪೂಜ್ಯರ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಿಸಿ ಅವರ ಸಾಹಿತ್ಯ, ಜನ ಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಲಿ ಎಂದು ಕಡಣಿ ಸಂಸ್ಥಾನ ಹಿರೇಮಠದ ವೇ. ಚನ್ನವೀರ ಸ್ವಾಮಿಗಳು ಸರಕಾರಕ್ಕೆ ಒತ್ತಾಯಿಸಿದರು.
ಅವರು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.20ರಂದು ಧಾರವಾಡದ ರಂಗಾಯಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಪಂ. ಪುಟ್ಟರಾಜ ಸಾಹಿತ್ಯೋತ್ಸವ-24 ಸಮಾರಂಭ ಉದ್ಘಾಟಿಸಿ ಮಾತನಾಡಿದರು.
 ಪಂ. ಪುಟ್ಟರಾಜರ ಜನ್ಮದಿನವನ್ನು ಸರಕಾರದಿಂದ ಆಚರಿಸಬೇಕು ಎಂದು ಸೇವಾ ಸಮಿತಿಯಿಂದ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದು, ಸರಕಾರ ಸ್ಪಂದಿಸಿ ಪೂಜ್ಯರ ಜನ್ಮದಿನ ಆಚರಣೆಗೆ ಚಾಲನೆ ನೀಡಲಿ ಎಂದು ಹೇಳಿದರು.
ಕ.ವಿ.ವಿ.ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಸಹಾಯಕ ಉಪನ್ಯಾಸಕ, ಸಾಹಿತಿ ಡಾ. ಎ.ಎಲ್. ದೇಸಾಯಿ ದಾರವಾಡ ಮಾತನಾಡಿ, ಪಂ. ಪಂಚಾಕ್ಷರಿ ಗವಾಯಿಗಳವರ ನಾಟಕ ರಂಗಾಯಣದ ಮೂಲಕ ಪ್ರಯೋಗವಾಗಬೇಕು. ಈ ಕೆಲಸ ಧಾರವಾಡದ ರಂಗಾಯಣದ ನಿರ್ದೇಶಕರರಾದ ರಾಜು ತಾಳಿಕೋಟಿ ಪ್ರಯತ್ನ ಮಾಡಬೇಕು ಎಂದು ವಿನಂತಿಸಿಕೊಂಡರು.
ರಂಗಾಯಣದ ನಿರ್ದೇಶಕ ಡಾ. ರಾಜು ತಾಳಿಕೊಟಿ ಪೂಜ್ಯ ಗುರು ಪುಟ್ಟರಾಜ ಕವಿಗವಾಯಿಗಳವರೊಂದಿಗಿನ ಒಡನಾಟ ಮತ್ತು ಪೂಜ್ಯರ ವೃತ್ತಿರಂಗಭೂಮಿಯ ಕುರಿತಾದ ಕಾಳಜಿ ಮತ್ತು ತಮ್ಮ ವೃತ್ತಿ ಬದುಕಿನಲ್ಲಿ ಪೂಜ್ಯರ ಆರ್ಶೀವಾದ ಕುರಿತಾಗಿ ಪೂಜ್ಯರನ್ನು ಸ್ಮರಿಸಿ ಮಾತನಾಡಿದರು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮನ್ಸೂರಿನ ರೇವಣಸಿದ್ಧೇಶ್ವರ ಮಠದ ಪೂಜ್ಯಶ್ರೀ ಡಾ. ಬಸವರಾಜ ದೇವರು ಮಾತನಾಡಿ ಪೂಜ್ಯ ಗುರು ಪುಟ್ಟರಾಜರ ಒಡನಾಟದ ನೆನಪು ಹಂಚಿಕೊಂಡು, ಸೇವಾ ಸಮಿತಿಯ ಬೇಡಿಕೆಗೆ ನಾವು ಸಂಪೂರ್ಣ ಬೆಂಬಲಿಸುತ್ತೇವೆ. ಮಾತ್ರವಲ್ಲದೆ, ಗುರು ಪುಟ್ಟರಾಜರಿಗೆ ಭಾರತ ರತ್ನ ಪ್ರಶಸ್ತಿಗೆ ಕರ್ನಾಟಕ ಸರಕಾರ ಶಿಫಾರಸು ಮಾಡಬೇಕು ಎಂದು ಹೇಳಿದರು.
ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಗೌರವ ಅಧ್ಯಕ್ಷ ಕೆಂಬಾವಿ ಸಂಸ್ಥಾನ ಹಿರೇಮಠದ ಶ್ರೀ ಷ. ಬ್ರ. ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ‘ರಾಜ್ಯ ಸಂಗೀತ ವಿದ್ವಾನ’ ಪಂ. ಬಸವರಾಜ ಹೆಡಿಗ್ಗೊಂಡ, ರಂಗಾಯಣದ ನೂತನ ನಿರ್ದೇಶಕರರಾದ ರಾಜು ತಾಳಿಕೋಟಿ ಇವರುಗಳಿಗೆ ಸನ್ಮಾನಿಸಲಾಯಿತು. ಪತ್ರಿಕಾ ಸಂಪಾದಕ ಎಸ್.ಎಸ್. ಪಾಟೀಲ್ ವೇದಿಕೆಯಲ್ಲಿದ್ದರು.
ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ 2024 ನೆಯ ‘ವರ್ಷದ ಶೇಷ್ಠ ಕೃತಿ ರತ್ನ ಪ್ರಶಸ್ತಿ’ ಗೆ ಭಾಜನ ಕೃತಿ ಕರ್ತರಾದ ಭಾತ್ರಂಬದ ಪೂಜ್ಯ ಜಗದ್ಗುರು ಶಿವಯೋಗೀಶ್ವರ ಮಹಾಸ್ವಾಮಿಗಳ ಬೆಳಗಾವಿಯ, ಡಾ. ಪಿ. ನಾಗರಾಜ, ಚಿಂಚನಸೂರನ ಶಿವಪುತ್ರ ಕಂಠಿ, ಕಲಬುರ್ಗಿಯ ಡಾ. ಅಂಬುಜಾ ಎನ್. ಮಳಖೇಡಕರ, ಬಾದಾಮಿ ಸುರೇಶ ಅರಳಿಮರ, ಹುಬ್ಬಳಿಯ ಪದ್ಮಜಾ ಜಯತೀರ್ಥ ಉಮರ್ಜಿ, ಧಾರವಾಡದ ಡಾ. ಈರಣ್ಣ ಇಂಜಗನೇರಿ, ಭೈರಾಪೂರದ ಯಲ್ಲಪ್ಪ ಮ. ಹರ್ನಾಳಗಿ, ಧಾರವಾಡದ ಸರಸ್ವತಿ ರಾ. ಬೋಸಲೆ, ಧಾರವಾಡದ ಡಾ. ವೀಣಾ ಸಂಕನಗೌಡರ ಇವರುಗಳಿಗೆ ಪ್ರಶಸ್ತಿ ಪ್ರದಾನಮಾಡಲಾಯಿತು. ಡಾ. ಸುರೇಶ ಕಳಸನ್ನವರ ಸ್ವಾಗತಿಸಿದರು, ಬಸವರಾಜ ಹಡಪದ ಕಾರ್ಯಕ್ರಮ ನಿರೂಪಣೆ ಮಾಡಿದರು.
ವಿದುಷಿ ರೋಹಿಣಿ ಇಮಾರತಿ ಧಾರವಾಡ, ವಿದುಷಿ ಡಾ. ಸುಮಾ ಹಡಪದ ಹಳಿಯಾಳ, ವಿದುಷಿ ವಿಜಯಲಕ್ಷ್ಮಿ ಬಸಯ್ಯ ಬನ್ನಿಗೋಳಮಠ ಇವರುಗಳಿಗೆ ಪುಟ್ಟರಾಜ ಸಂಗೀತ/ನೃತ್ಯ ಸೇವಾ ಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Spread the love
Advertisement

LEAVE A REPLY

Please enter your comment!
Please enter your name here