ನೇರಳೆ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?

0
Spread the love

ನೋಡಲು ಕಪ್ಪಾಗಿದ್ದರೂ ರುಚಿಯಲ್ಲಿ ಮಾತ್ರ ನೇರಳೆ ಹಣ್ಣು ಇತರೇ ಹಣ್ಣುಗಳ ಜತೆ ಸ್ಪರ್ಧೆಗೆ ಇಳಿಯುತ್ತದೆ. ಅಷ್ಟೆ ಅಲ್ಲ, ಆರೋಗ್ಯವರ್ಧಕವಾಗಿಯೂ ಇದು ಖ್ಯಾತಿ. ಅಪಾರ ಪೌಷ್ಟಿಕಾಂಶಗಳನ್ನು ಹೊಂದಿರುವ ನೇರಳೆ ರೋಗ ನಿರೋಧಕವಾಗಿಯೂ ಬಳಕೆಯಾಗುತ್ತದೆ. ಹೊಟ್ಟೆ ಹುಣ್ಣು ನಿವಾರಿಸಲು ಮತ್ತು ಅತಿಸಾರವಾದಾಗ ನೇರಳೆ ಹಣ್ಣಿನ ಪಾನಕ ಸೇವನೆ ಬಹಳ ಪ್ರಯೋಜನಕಾರಿ.

Advertisement

ಇದರಲ್ಲಿರುವ ಪಾಲಿಫೊನಾಲ್‌ಗಳು ಕ್ಯಾನ್ಸರ್‌ ಸೆಲ್ಸ್‌ಗಳನ್ನು ತಡೆಗಟ್ಟುವಲ್ಲಿ ಸಹಾಯಕ. ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಅಧಿಕವಾಗದಂತೆ ತಡೆಯುತ್ತದೆ. ಮಧುಮೇಹಿಗಳಲ್ಲಿ ಪದೇಪದೆ ಮೂತ್ರ ವಿಸರ್ಜನೆ ಹಾಗೂ ದಾಹವನ್ನು ನೇರಳೆ ಹಣ್ಣಿನ ಸೇವನೆಯಿಂದ ನಿಯಂತ್ರಿಸಬಹುದು.

ನೇರಳೆ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ

*ದೀರ್ಘಕಾಲದವರೆಗೆ ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕಲ್ಮಶಗಳನ್ನು ತೊಡೆದುಹಾಕಲು ನೇರಳೆ ಹಣ್ಣು ತಿನ್ನುವುದು ಒಳ್ಳೆಯದು.

*  ಮಧುಮೇಹದಂತಹ ಕಾಯಿಲೆಯಿಂದ ಬಳಲುತ್ತಿರುವವರು ನೇರಳೆ ಹಣ್ಣನ್ನು ಸೇವಿಸುವುದು ಉತ್ತಮ.

* ಕೆಲವೊಮ್ಮೆ ಕರಳಿನಲ್ಲಿ ಕೂದಲು ಸೇರುವ ಸಾಧ್ಯತೆ ಇರುತ್ತದೆ. ಇದನ್ನು ಹೊರಹಾಕುವ ಶಕ್ತಿ ನೇರಳೆ ಹಣ್ಣಿಗೆ ಇದೆ.

* ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೇರಳೆ ಹಣ್ಣು ಪ್ರಮುಖ ಪಾತ್ರವಹಿಸಿತ್ತದೆ ಮತ್ತು ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತದೆ.

* ಮೂತ್ರದ ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ನೇರಳೆ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ.

* ಬಂಜೆತನ ಇರುವವರು ನೇರಳೆ ಹಣ್ಣು ತಿನ್ನುವುದರಿಂದ ತ್ವರಿತ ಶಕ್ತಿಯನ್ನು ಪಡೆಯುತ್ತಾರೆ.

* ಬೆನ್ನು ನೋವು, ಮೊಣಕಾಲು ನೋನಿನಂತಹ ಸಮಸ್ಯೆಯನ್ನು ದೂರ ಮಾಡುತ್ತದೆ.

* ಅತಿಸಾರದಿಂದ ಬಳಲುತ್ತಿರುವವರಿಗೆ ನೇರಳೆ ಹಣ್ಣಿನ ರಸವನ್ನು ಎರಡು ಮೂರು ಚಮಚ ನೀಡಬೇಕು.

* ಕೆಲವು ಅಧ್ಯಯನಗಳು ನೇರಳೆ ಹಣ್ಣು ಯಕೃತ್ತಿನ ಕಾರ್ಯವನ್ನು ನಿಯಂತ್ರಿಸಲು ಅಥವಾ ಶುದ್ಧೀಕರಿಸಲು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ

 


Spread the love

LEAVE A REPLY

Please enter your comment!
Please enter your name here