ಬೆಂಗಳೂರು:- ಶೀಘ್ರವೇ ಶೋಭಾ ಕರಂದ್ಲಾಜೆ ಭ್ರಷ್ಟಾಚಾರ ದಾಖಲೆ ಬಿಡುಗಡೆ ಮಾಡ್ತೀವಿ ಎಂದು ಬೈರತಿ ಸುರೇಶ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಅಧಿಕಾರ ಅವಧಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರು ಏನೆಲ್ಲಾ ಮಾಡಿದ್ದಾರೆ? ಇಂಧನ ಸಚಿವರಾಗಿದ್ದ ಶೋಭಾ ಕರಂದ್ಲಾಜೆಯವರು ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ? ದಾಖಲೆ ಸಂಗ್ರಹಿಸಲು ಹೇಳಿದ್ದೇನೆ. 15 ದಿನ ಬಿಟ್ಟು ಅವರ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದರು.
ಶೋಭಾ ಕರಂದ್ಲಾಜೆ ಅವರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಬಿಜೆಪಿ ಅಧಿಕಾರ ಅವಧಿಯಲ್ಲಿ ಅವರು ಏನೆಲ್ಲಾ ಮಾಡಿದ್ದಾರೆ? ಇಂಧನ ಸಚಿವರಾಗಿದ್ದ ಶೋಭಾ ಕರಂದ್ಲಾಜೆಯವರು ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ? ಈ ಸಂಬಂಧ ಪೊನ್ನಣ್ಣ ಅವರಿಗೆ ಇದರ ಎಲ್ಲಾ ದಾಖಲೆ ಸಂಗ್ರಹಿಸಲು ಹೇಳಿದ್ದೇನೆ. 15 ದಿನ ಬಿಟ್ಟು ಅವರ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಬಾಂಬ್ ಸಿಡಿಸಿದ್ದಾರೆ.
ಹೆಚ್. ವಿಶ್ವನಾಥ್ ಆಧಾರ ರಹಿತ ಆರೋಪ ಮಾಡ್ತಿದ್ದಾರೆ. ಗೊಬೆಲ್ಸ್ ವಂಶಸ್ಥರು ಅವರು, ವಿಶ್ವನಾಥ್ ಥರ್ಡ್ ಗ್ರೇಡ್ ವ್ಯಕ್ತಿ. ನನ್ನ ಪೂರ್ವಜರಿಂದ ಬಂದ ಪ್ರಾಪರ್ಟಿಗೂ ಸಿದ್ದರಾಮಯ್ಯ ಕುಟುಂಬಕ್ಕೂ ಏನು ಸಂಬಂಧ? ವಿಶ್ವನಾಥ್‌ಗೆ ಮತಿಭ್ರಮಣೆ ಆಗಿದೆ ಎಂದು ಲೇವಡಿ ಮಾಡಿದ್ದಾರೆ.
ನನ್ನ ತಾತ ಖರೀದಿ ಮಾಡಿದ ಜಮೀನು ಹೆಣ್ಣೂರ್ ಬಳಿಯಿದೆ. ಅಲ್ಲಿ ಎರಡು ಹೊಟೇಲ್‌ಗಳಿವೆ. ಇದಕ್ಕೂ ಸಿದ್ದರಾಮಯ್ಯಗೂ ಅವರ ಸೊಸೆಗೂ ಏನು ಸಂಬಂಧ? ವಿಶ್ವನಾಥ್ ಬಗ್ಗೆ ನಾವು ಮಾತನಾಡಬೇಕಾಗಿರುವುದು ದೌರ್ಭಾಗ್ಯ. ಯಾರು ಸಹಾಯ ಮಾಡ್ತಾರೋ ಅವರನ್ನೇ ಕಚ್ಚುವ ಸ್ವಭಾವ ವಿಶ್ವನಾಥ್‌ಗೆ ಇದೆ. ಅವರಿಗೂ ಒಬ್ಬ ಮಗ ಇದ್ದಾನೆ, ಅವರಿಗೂ ಸೊಸೆ ಇದ್ದಾರೆ. ಸಿದ್ದರಾಮಯ್ಯಗೆ ಆದಂತೆ ವಿಶ್ವನಾಥ್‌ಗೆ ಆದ್ರೆ? ಆಗ ಏನ್ ಮಾಡ್ತಾರೆ? ಎನುತ್ತಲೇ ಪಾಪ ಹಾಗೆ ಆಗದಿರಲಿ ಎಂದಿದ್ದಾರೆ.