ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಮನೋರಮಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ `ಹಳೆಯ ಬೇರು ಹೊಸ ಚಿಗುರು’ ಸಂವಾದ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಕಾಲೇಜಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಆಪ್ರೀನ ಮುಲ್ಲಾ ಹಾಗೂ ವಿನಾಯಕ ಮೆಹರವಾಡೆ, ಸಿಎ ಪರೀಕ್ಷೆ ಪಾಸಾಗಿ ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳು ಸಿಎ ಪರೀಕ್ಷೆಯ ತಯಾರಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಆಪ್ರೀನಾ ಮಾತನಾಡಿ, ಸತತ ಅಭ್ಯಾಸದಿಂದ ಹಾಗೂ ಉಪನ್ಯಾಸಕರ ಮಾರ್ಗದರ್ಶನದಿಂದ, ತಂದೆ-ತಾಯಿಯರ ಆಶಿರ್ವಾದದಿಂದ ಸಿಎ ಪರೀಕ್ಷೆಯಲ್ಲಿ ಪಾಸಾಗಲು ಸಾಧ್ಯವಾಯಿತು ಎಂದರು.
ವಿನಾಯಕ ಮೆಹರವಾಡೆ ಮಾತನಾಡಿ, ಮೊಬೈಲ್ ಪೋನನ್ನು ಹಿತಮಿತವಾಗಿ ಬಳಸಲು ತಿಳಿಸಿ, ಪ್ರತಿದಿನ 8 ಗಂಟೆ ಅಧ್ಯಯನ ಮಾಡಿದಾಗ ಸಾಧಕರ ಸಾಲಿನಲ್ಲಿ ತಮ್ಮ ಹೆಸರು ಕೂಡಾ ಬರುವುದು ಎಂದರು.
ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಸ್. ಹಿರೇಮಠ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಸಾಧನೆಯನ್ನು ಸ್ಮರಿಸಿ ಸಂತಸ ವ್ಯಕ್ತ ಪಡಿಸಿ, ಪ್ರತಿ ವಿದ್ಯಾರ್ಥಿಗಳ ಪ್ರತಿಭೆ ಅರಳಬೇಕಾದರೆ ನಿರ್ದಿಷ್ಟ ಗುರಿ ಹೊಂದಿರಬೇಕು. ಗುರು-ಹಿರಿಯರ ಮಾರ್ಗದರ್ಶನದೊಂದಿಗೆ ಉತ್ತಮ ಸಾಧಕರಾಗಿರಿ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಸ್ಥೆಯ ನಿರ್ದೇಶಕರಾದ ಮಂಜುನಾಥ ಕುಡತರಕರ, ಸಂಜಯಕುಮಾರ ಕುಡತರಕರ, ಚೇತನ ಕುಡತರಕರ, ಬಿಕಾಂ ಸಂಯೋಜಕರಾದ ಪ್ರೊ. ಅಲ್ವಿನಾ ಡಿ, ಬಿಬಿಎ ಸಂಯೋಜಕಿ ಪ್ರೊ. ಚೈತ್ರಾ ಡಿ ಹಾಗೂ ಪಿಯು ಸಂಯೋಜಕರಾದ ಪ್ರೊ ಶಾಹಿದಾ ಶಿರಹಟ್ಟಿ ಉಪಸ್ಥಿತರಿದ್ದರು.