ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಲಕ್ಷ್ಮಣಸಾ ಸಭಾಗೃಹದಲ್ಲಿ ಗದಗ ಎಸ್ಎಸ್ಕೆ ಸಮಾಜ ಪಂಚ ಕಮಿಟಿಯ ಅಧ್ಯಕ್ಷ ಫಕೀರಸಾ ಬಾಂಡಗೆ, ಉಪಾಧ್ಯಕ್ಷ ರಾಜು ಬದಿ, ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಇವರ ನೇತೃತ್ವದಲ್ಲಿ ಸಹಸ್ರಾರ್ಜುನ ಮಹಾರಾಜರ ಜಯಂತಿ ಕುರಿತು ಪೂರ್ವಬಾವಿ ಸಭೆ ಜರುಗಿತು.
ಸಭೆಯಲ್ಲಿ ನವೆಂಬರ್ 8ರಂದು ನಡೆಯಲಿರುವ 2024-25ನೇ ಸಾಲಿನ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ಸಮಿತಿಗೆ ಚೇರಮನ್ರಾಗಿ ಸಾಗರ ಪವಾರ, ವೈಸ್ ಚೇರಮನ್ರಾಗಿ ಮಾಧುಸಾ ಬದಿ, ಕಾರ್ಯದರ್ಶಿಗಳಾಗಿ ಮೋಹನಸಾ ಪವಾರ, ಸಹ ಕಾರ್ಯದರ್ಶಿಗಳಾಗಿ ಕಸ್ತೂರಿಬಾಯಿ ಬಾಂಡಗೆ, ಖಜಾಂಚಿಯಾಗಿ ಪ್ರದೀಪ ಖಟವಟೆ ಇವರನ್ನು ನೇಮಕ ಮಾಡಲಾಯಿತು.
ನೂತನ ಚೇರಮನ್ ಸಾಗರ ಪವಾರ ಮಾತನಾಡಿ, ಈ ಬಾರಿ ನಡೆಯುವ ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವದಲ್ಲಿ ಸುಗಮ ಸಂಗೀತ, ರಸಮಂಜರಿ ಕಾರ್ಯಕ್ರಮ, ಬೆಳಿಗ್ಗೆ ಬೈಕ್ ರ್ಯಾಲಿ, ಸಂಜೆ ಸಹಸ್ರಾರ್ಜುನ ಮಹಾರಾಜರ ಬೆಳ್ಳಿಯ ಮೂರ್ತಿ ಹಾಗೂ ಭಾವಚಿತ್ರ ಮೆರವಣಿಗೆ, ನಂತರ ಮಹಾಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಗದಗ ಎಸ್ಎಸ್ಕೆ ಸಮಾಜದ ಪಂಚ ಕಮಿಟಿಯ ಸದಸ್ಯರುಗಳಾದ ಸುರೇಶಕುಮಾರ ಬದಿ, ಮೋತಿಲಾಲಸಾ ಪೂಜಾರಿ, ವಿಷ್ಣುಸಾ ಶಿದ್ಲಿಂಗ, ಅನಿಲ್ ಖಟವಟೆ, ಪರಶುರಾಮ ಬದಿ, ಶ್ರೀನಿವಾಸ ಬಾಂಡಗೆ, ವಿನೋದ ಬಾಂಡಗೆ, ಪ್ರಕಾಶ ಬಾಕಳೆ, ಗಣಪತಿ ಜಿತೂರಿ, ಅಂಬಾಸಾ ಖಟವಟೆ, ಜಿ.ಎನ್. ಹಬೀಬ, ವಿಶ್ವನಾಥಸಾ ಸೋಳಂಕಿ, ಶ್ರೀಕಾಂತ ಬಾಕಳೆ, ನಾಗರಾಜ ಖೋಡೆ, ಶ್ರೀಕಾಂತ ಅರಸಿದ್ದಿ, ಭೀಮಾ ಕಾಟಿಗರ, ಸಂತೋಷ ಖಟವಟೆ, ರಾಘು ಬಾಂಡಗೆ, ಜಗದೀಶ ಪವಾರ, ಉಮಾಬಾಯಿ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.