ವಿಜಯಸಾಕ್ಷಿ ಸುದ್ದಿ, ಗದಗ : ಮುಂಡರಗಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಆಶ್ರಯದಲ್ಲಿ ರೈತರ ಪ್ರತಿಭಟನೆಗೆ ಸೋಮವಾರ ಬೆಳಿಗ್ಗೆ ತಾಮ್ರಗುಂಡಿ ಕೆರೆಯ ಬಳಿ ಚಾಲನೆ ನೀಡಲಾಯಿತು.
ವೇದಿಕೆಯ ಸಂಚಾಲಕ ಬಸವರಾಜ ಯಲ್ಲಪ್ಪ ನವಲಗುಂದ ಮಾತನಾಡಿ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಹೊಬಳಿ ವ್ಯಾಪ್ತಿಯಲ್ಲಿ ಬರುವ ಮುರಡಿ, ತಾಮ್ರಗುಂಡಿ ಗ್ರಾಮದ ಕೆರೆಯ ಸಲುವಾಗಿ ಮುರಡಿ ಕೆರೆಗೆ 312 ಎಕರೆ ಭೂಸ್ವಾಧೀನಪಡಿಸಿಕೊಂಡಿದ್ದು, ತಾಮ್ರಗುಂಡಿ ರೈತರ ಆರುವರೆ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅದಕ್ಕೆ ಪರಿಹಾರ ಕೊಡದೇ ಇರುವ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕುವ ಈ ರೈತರ ಹೋರಾಟ ಯಶಸ್ವಿಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಚನ್ನವೀರಪ್ಪ ಅಂಗಡಿ, ಮಲ್ಲಪ್ಪ ಅಂಗಡಿ, ಸಿದ್ದಲಿಂಗೇಶ ಚನ್ನವೀರಪ್ಪ ಅಂಗಡಿ, ಬಸಪ್ಪ ವಡ್ಡರ, ಬಸವರಾಜ ಬನ್ನಿಕೊಪ್ಪ ಮುಂತಾದವರು ಉಪಸ್ಥಿತರಿದ್ದರು.
Advertisement