ಮೈಸೂರು:- ಮುಸ್ಲಿಮರಿಗೆ ವಕ್ಫ್ ಆಸ್ತಿ ಎಲ್ಲಿಂದ ಬಂತು!? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.
ವಿಜಯಪುರ ಬೆನ್ನಲ್ಲೇ ಉತ್ತರ ಕರ್ನಾಟಕದ ಜಿಲ್ಲೆಗಳ ರೈತರ ಪಿತ್ರಾರ್ಜಿತ ಆಸ್ತಿಗಳಿಗೆ ವಕ್ಫ್ ಮಂಡಳಿಯಿಂದ ನೋಟಿಸ್ ಬಂದಿರುವ ಬಗ್ಗೆ ಮಾತನಾಡಿದ ಅವರು,
ಮುಸ್ಲಿಮರು ವಕ್ಫ್ ಆಸ್ತಿ ಎನ್ನುತ್ತಾರಲ್ಲ, ಅದು ಅವರಿಗೆ ಯಾರಿಂದ ಬಂತು? ಅಕ್ಬರ್, ಔರಂಗಜೇಬ್, ಜಿನ್ನಾ ಅಥವಾ ಯಾರಾದರೂ ಸೌದಿಯ ಮುಲ್ಲಾಗಳು ಕೊಟ್ಟ ಆಸ್ತಿಯೇ ಇದು? ಪ್ರತ್ಯೇಕ ಆಸ್ತಿ ಮುಸ್ಲಿಮರಿಗೆ ಎಲ್ಲಿಂದ ಬಂತು? ಯಾರಿಂದ ಅವರಿಗೆ ಬಳುವಳಿ ಬಂದಿದ್ದು ಎಂದು ಪ್ರಶ್ನಿಸಿದರು.
ಮೈಸೂರಿನ ಹುಣಸೂರಿನಲ್ಲೂ ಗಣೇಶ ದೇವಾಲಯದ 17 ಎಕರೆ ನಮ್ಮದು ಎಂದು ವಕ್ಫ್ ಬೋರ್ಡ್ ಪಟ್ಟುಹಿಡಿದಿದೆ. ಯಾರದೋ ಹೆಣ ತಂದು ಹೂತು ನಮ್ಮದು ಎನ್ನುತ್ತಿದ್ದಾರೆ. ಚಿಕ್ಕಮಗಳೂರಿನಲ್ಲೂ ಇದೇ ಕಥೆ ಆಗಿದೆ. ಕಂಡವರ ಜಮೀನಿಗೆಲ್ಲಾ ಮುಲ್ಲಾಗಳು ನೋಟಿಸ್ ಕೊಡುತ್ತಾ, ‘ಇದು ನಮ್ಮದು’ ಎನ್ನುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಕಿಡಿಕಾರಿದರು.
ವಕ್ಫ್ ಬೋರ್ಡ್ ಜಮೀನಿನಲ್ಲಿ ಮುಸ್ಲಿಮರಿಗೆ ಉಳುಮೆ ಮಾಡಲು ಅವಕಾಶ ಕೊಟ್ಟಿದ್ದೀರಾ? ನಮ್ಮ ದೇವಾಲಯ, ಮಠಗಳಲ್ಲಿ ಹಾಕುವಂತೆ ಯಾವತ್ತಾದರೂ ಮಸೀದಿ ಚರ್ಚ್ಗಳಲ್ಲಿ ಹಿಡಿ ಅನ್ನವನ್ನು ಯಾರಿಗಾದರೂ ಬಡಿಸಿದ್ದೀರಾ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.