ನಾವು ನಿತ್ಯ ಪುನೀತ್ ಮಿಸ್ ಮಾಡಿಕೊಳ್ಳುತ್ತಿದ್ದೇವೆ: ತಮ್ಮನನ್ನು ನೆನೆದು ರಾಘಣ್ಣ ಭಾವುಕ!

0
Spread the love

ಬೆಂಗಳೂರು:- ನಾವು ನಿತ್ಯ ಪುನೀತ್ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ತಮ್ಮನನ್ನು ನೆನೆದು ರಾಘಣ್ಣ ಭಾವುಕರಾಗಿದ್ದಾರೆ.

Advertisement

ಅಪ್ಪು ಅಗಲಿ ಇಂದಿಗೆ 3 ವರ್ಷ ಆಗಿರುವ ಹಿನ್ನೆಲೆ, ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ ಮಾಡಲಾಯಿತು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರಾಘಣ್ಣ, ವರ್ಷ ಮೂರು ಮರೆಯದ ನೆನಪು ನೂರು ಎಂದು ಸಹೋದರ ಪುನೀತ್‌ರನ್ನು ಸ್ಮರಿಸಿದ್ದಾರೆ.

ನಾವು ಪುನೀತ್ ದಿನ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಹೇಗೆ ದಿನಗಳು ಉರುಳುತ್ತಿದೆ. ಜನಗಳಿಗೆ ಅಪ್ಪು ಮೇಲಿನ ಪ್ರೀತಿ ಕಮ್ಮಿಯಾಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಅಪ್ಪು ಮೇಲಿನ ಜನಗಳ ಪ್ರೀತಿ ಹೆಚ್ಚಾಗುತ್ತಿದೆ.

ವರ್ಷ ಮೂರು ಮರೆಯದ ನೆನಪು ನೂರು ಎಂದು ಅಪ್ಪು ಕುರಿತು ರಾಘಣ್ಣ ಮಾತನಾಡಿದ್ದಾರೆ. ಪ್ರತಿದಿನ ಆತನ ನೋವಿನಲ್ಲೇ ನಾವು ಕಾಲ ಕಳೆಯುತ್ತಿದ್ದೇವೆ ಎಂದಿದ್ದಾರೆ.

ಪುನೀತ್ ಕೊಟ್ಟ ಸ್ಪೂರ್ತಿ ಹಿನ್ನಲೆಯಲ್ಲಿ ಅಪ್ಪು ಹುಟ್ಟುಹಬ್ಬವನನ್ನ ಸ್ಪೂರ್ತಿ ದಿನವಾಗಿ ಆಚರಿಸುತ್ತೇವೆ. ನಿಮ್ಮ ಪ್ರೀತಿಗೆ ಬೆಲೆ ಕಟ್ಟೋಕೆ ಆಗೋಲ್ಲ. ಅಪ್ಪು ನಮ್ಮ ಮನೆಗೆ ಮಾತ್ರ ಅಲ್ಲ, ಎಲ್ಲರಿಗೂ ಬೇಕು ಎಂದು ಮಾತನಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here