HomeGadag Newsಹಿರಿಯ ನಾಗರಿಕರಿಗೆ ಸನ್ಮಾನ ನಾಳೆ

ಹಿರಿಯ ನಾಗರಿಕರಿಗೆ ಸನ್ಮಾನ ನಾಳೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಅ. 31ರಂದು ಸಂಜೆ 5ಕ್ಕೆ ಹಿರಿಯ ನಾಗರಿಕರಿಗೆ ಸನ್ಮಾನ, ರಂಗೋಲಿ ಸ್ಪರ್ಧೆ ಮತ್ತು ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ತಿಳಿಸಿದರು.

ಅವರು ಈ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿ, ಯುವ ಮುಖಂಡ ಅಪ್ಪು ಕಳಕಪ್ಪ ಉಮಚಗಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಬಸ್ತಿಬಣದ ಎಸ್‌ಟಿಪಿಎಂಸಿ ಶಾಲೆಯ ಹಿಂಭಾಗದಲ್ಲಿ ನಡೆಯಲಿದೆ. ನಂತರ ಎವರ್‌ಗ್ರೀನ್ ಮೆಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ನಿಂಗಪ್ಪ ಪಕ್ಕೀರಪ್ಪ ಉಮಚಗಿ, ನಾಗಪ್ಪ ಉಮಚಗಿ, ಮಲ್ಲಪ್ಪ ಉಮಚಗಿ, ಮಹಾದೇವಪ್ಪ ಉಮಚಗಿ, ಚನ್ನವೀರಪ್ಪ ಅಣ್ಣಿಗೇರಿ, ಅಶೋಕ ನೀರಾಲೋಟಿ, ಮುತ್ತು ನೀರಲಗಿ, ಮಂಜುನಾಥ, ಮುಳುಗುಂದ, ಕಳಕಪ್ಪ ಉಮಚಗಿ, ಮಲ್ಲಿಕಾರ್ಜುನ ನೀರಾಲೋಟಿ, ಮಹಾಂತೇಶ ಉಮಚಗಿ ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img