ಸಂಘದ ಉತ್ಪನ್ನ ಮಾರಾಟಕ್ಕೆ ಚಾಲನೆ

0
Drive product sales of the association
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಸೂಪರ್ ಮಾರ್ಕೆಟ್‌ನಲ್ಲಿ ಮಂಗಳವಾರ ಸಂಜೀವಿನಿ (ಎನ್‌ಆರ್‌ಎಲ್‌ಎಂ) ಯೋಜನೆಯಡಿ ಜಿಲ್ಲೆಯ ವಿವಿಧೆಡೆಗಳಲ್ಲಿ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಜಿಲ್ಲಾ ಸಂಜೀವಿನಿ ಯೋಜನೆಯ ವ್ಯವಸ್ಥಾಪಕ ಮಡ್ಡೇಶ್ ಮಳ್ಳಿಮಾರ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು, ಸರಕಾರ ಜನಸಾಮಾನ್ಯರಿಗೆ ರಿಯಾಯಿತಿ ಮತ್ತು ಗುಣಮಟ್ಟದ ಸೇವೆ ಕಲ್ಪಿಸುವ ದಿಸೆಯಲ್ಲಿ ವಿಫುಲ ಅವಕಾಶಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಗ್ರಾಹಕರು ಇಂತಹ ಸೇವೆಗಳಿಗೆ ಉತ್ತೇಜನ ನೀಡಲು ಮುಂದಾಗಬೇಕು ಎಂದರು.

ತಾಲೂಕಾ ಸಮೂಹ ಮೇಲ್ವಿಚಾರಕ ಸಿದ್ದು ಸತ್ಯಣ್ಣವರ, ಗವಿಸಿದ್ದಪ್ಪ ಕಂದಗಲ್ಲ್ ಮತ್ತಿತರರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here