ವಿಜಯಸಾಕ್ಷಿ ಸುದ್ದಿ, ಗದಗ : ಪೌಷ್ಠಿಕ ಆಹಾರ ಸೇವನೆಯಿಂದ ಸದೃಢ ಆರೋಗ್ಯ ಪಡೆಯಬಹುದು. ಮಕ್ಕಳು ಹಿತಮಿತ ಆಹಾರ ಸೇವನೆ. ಸರಿಯಾದ ಆರೋಗ್ಯ ಕ್ರಮಗಳನ್ನು ಅನುಸರಿಸಬೇಕೆಂದು ಡಾ.ರಾಮಚಂದ್ರ ಹಂಸನೂರ ಹೇಳಿದರು.
ಅವರು ಮಂಗಳವಾರ ಗದಗ ಭಾವಸಾರ ವಿಜನ್‌ದಿಂದ ನಗರದ ಸಿ.ಎಸ್. ಪಾಟೀಲ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಆರೋಗ್ಯ ಜಾಗೃತಿ ಹಾಗೂ ವಿದ್ಯಾರ್ಥಿಗಳಿಗೆ ರಕ್ತದ ಗುಂಪು ಗುರುತಿಸುವಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುರುಕಲು ತಿಂಡಿಗಳು, ತಂಪು ಪಾನೀಯಗಳು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ. ಇದರ ಬದಲಾಗಿ ಮಕ್ಕಳು ಸತ್ವಯುತವಾದ ಆಹಾರ ಸೇವನೆ, ನಿರ್ದಿಷ್ಟ ವ್ಯಾಯಾಮಗಳನ್ನು ರೂಢಿಸಿಕೊಳ್ಳಬೇಕು ಎಂದರು.
ರಕ್ತ ತಪಾಸಿಗ ಡಾ.ದತ್ತಾತ್ರೇಯ ವೈಕುಂಠೆ ಮಾತನಾಡಿ, ಹಸಿರು ಕಾಯಿಪಲ್ಲೆಗಳು, ಮೊಳಕೆ ಕಾಳುಗಳು ಆರೋಗ್ಯಕ್ಕೆ ಪೂರಕವಾಗಿವೆ. ಊಟ ಮಾಡುವಾಗ ಮಕ್ಕಳು ತರಕಾರಿಗಳನ್ನು ಸೇವಿಸುವದನ್ನು ರೂಢಿಸಿಕೊಳ್ಳಬೇಕು ಎಂದರು.
ವೇದಿಕೆಯ ಮೇಲೆ ಗದಗ ಭಾವಸಾರ ವ್ಹಿಜನ್‌ದ ಆರ್.ಎಸ್. ತ್ರಿಮಲ್ಲೇ ಹಾಗೂ ಜಯಶ್ರೀ ತ್ರಿಮಲ್ಲೆ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಪಿ. ಹಿರೇಮಠ ಸ್ವಾಗತಿಸಿದರು, ಎಸ್.ಎಂ. ತಳವಾರ ನಿರೂಪಿಸಿದರು. ಜಿ.ಸಿ.ಪಾಟೀಲ ವಂದಿಸಿದರು, ಕೆ.ಬಿ. ಬಾಗೇವಾಡಿ, ವ್ಹಿ.ಎಚ್. ಪಾಟೀಲ, ಉಮಾ ದಾನೇಶ್ವರಮಠ, ಎಂ.ಎಸ್. ಪಾಟೀಲ, ವಿಜಯಲಕ್ಷ್ಮಿ ಪೂಜಾರ, ವ್ಹಿ.ವ್ಹಿ. ಪಾಟೀಲ, ನೀಲಾ ಪಲ್ಲೇದ, ಶಾರದಾ ವಡ್ಡಿನ, ಗೀತಾ ದಾನೇಶ್ವರಮಠ, ಬಸಮ್ಮ ಅರಳಿಕಟ್ಟಿ, ಸಾವಿತ್ರಿ ಕಾತರಕಿ, ಕಸ್ತೂರಿ ಕಟ್ಟಿಮನಿ ಲಕ್ಷ್ಮವ್ವ ನಾಯಕ ಮುಂತಾದವರಿದ್ದರು.
ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಜನರ ರಕ್ತದ ಗುಂಪು ತಪಾಸಣೆ ನಡೆಸಿ ಚೀಟಿ ವಿತರಿಸಲಾಯಿತು.